This is the title of the web page

ನಕಲಿ ‘ಎಸಿಬಿ ಅಧಿಕಾರಿ’ ಗಳ ಬಂಧನ

ಬೆಳಗಾವಿ, ೧೪, (www.samadarshi.net)- ತಾವು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳೆಂದು ಹೇಳಿ ಅಧಿಕಾರಿಗಳಿಂದ ಲಕ್ಷಾಂತರ ರೂಪಾಯಿ ಹಣ ಪಡೆದ ಮೂವರನ್ನು ಬೆಳಗಾವಿ ಸೈಬರ್ ಕ್ರೈಮ್ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತರು ಕಂದಾಯ, ನೋಂದಣಿ, ಆರ್ ಟಿ ಓ ಮುಂತಾದ ಕಚೇರಿಯ ಭ್ರಷ್ಟ ಅಧಿಕಾರಿ, ಸಿಬ್ಬಂದಿಗೆ ಫೋನ್ ಮಾಡಿ ಅವರ ಭ್ರಷ್ಟಾಚಾರದ ಕುರಿತು ಮಾಹಿತಿ ಇದ್ದು ಅವರ ಕಚೇರಿ, ಮನೆಗಳಿಗೆ ದಾಳಿ ಮಾಡಿ ಬಂಧಿಸುವದಾಗಿಯೂ ಹೆದರಿಸುತ್ತಿದ್ದರು. ನಂತರ ತಮ್ಮ ಬ್ಯಾಂಕ್ ಅಕೌಂಟ್ ನೀಡಿ ತಾವು ಹೇಳಿದಷ್ಟು ಹಣ ಜಮಾ ಮಾಡಿಸಿಕೊಂಡಿದ್ದರು.

ಇವರಿಂದ ಬೆದರಿಕೆಗೊಳಗಾದ ಪ್ರಾಮಾಣಿಕ ಸಿಬ್ಬಂದಿಯೊಬ್ಬರು ಈ ಕುರಿತು ಬೆಳಗಾವಿಯ ಭ್ರಷ್ಟಾಚಾರ ನಿಗ್ರಹ ದಳದ ಗಮನಕ್ಕೆ ತಂದಿದ್ದರು. ಕಾರ್ಯ ಪ್ರವೃತರಾದ ತಂಡ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದ ಮುರುಗೇಶ ನಿಂಗಪ್ಪ ಪೂಜೇರ, ಕೊಲ್ಹಾಪುರ ಜಿಲ್ಲೆಯ ಶಿರೋಳ ತಾಲೂಕಿನ ಬಸ್ತವಾಡ ಗ್ರಾಮದ ರಾಜೇಶ ಬಾಪೂಸಾ ಚೌಗಲೆ ಹಾಗು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ರಜನಿಕಾಂತ ನಾಗರಾಜ ಎಂಬ ಮೂರು ಜನರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದೆ.

You might also like
Leave a comment