Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

Crime News

ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರ ಬಂಧನ 


ಹುಬ್ಬಳ್ಳಿ: ನೋಟು ಬ್ಯಾನ್ ಆಗಿ ಹೊಸ ನೋಟುಗಳು ಬಂದರೆ ಖೋಟಾ ನೋಟು ದಂಧೆ ಸಂಪೂರ್ಣ ಬಂದ್ ಆಗಲಿದೆ ಎಂದು ಹೇಳಿದ್ದ ಸರ್ಕಾರದ ಹೇಳಿಕೆ ಹುಸಿಯಾಗಿದ್ದು ದೇಶದಲ್ಲಿ ಖೋಟಾ ನೋಟು ಚಲಾವಣೆಯ ಹಲವಾರು ಘಟನೆಗಳು ವರದಿಯಾಗುತ್ತಲೇ ಇವೆ. ಅಂಥದ್ದೇ ಘಟನೆ ಹುಬ್ಬಳ್ಳಿಯಿಂದ ವರದಿಯಾಗಿದೆ. ಇಲ್ಲಿನ ಲಾಡ್ಜ್ ನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ಪತ್ರಕರ್ತ ಸೇರಿದಂತೆ ನಾಲ್ವರನ್ನು ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ವಿಜಯಪುರದಿಂದ ಬಂದು ಹುಬ್ಬಳ್ಳಿಯ ಲಾಡ್ಜವೊಂದರಲ್ಲಿ ತಂಗಿದ್ದ ಕುರಿತು ದೊರೆತ ಮಾಹಿತಿ ಮೇಲೆ ದಾಳಿ ಮಾಡಿದ್ದು, ದಾಳಿಯ ಸಮಯದಲ್ಲಿ ಮೂವರು ಸಿಕ್ಕಿ ಬಿದ್ದು ಓರ್ವ ಪರಾರಿ ಆಗಿದ್ದಾನೆ. ಬಂಧಿತರಿಂದ 200 ರೂಪಾಯಿ ಮುಖ ಬೆಲೆಯ 129 ನಕಲಿ ನೋಟುಗಳು, 100 ರೂಪಾಯಿ ಮುಖ ಬೆಲೆಯ 77 ಖೋಟಾ ನೋಟು ಹಾಗೂ ಯುನಿಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಒಂದು ಡಾಲರ್ ಹಾಗೂ ಅದಕ್ಕೆ ಸಂಬಂಧಪಟ್ಟ ಸರ್ಟಿಫಿಕೇಟ್ ಮತ್ತು 100 ರೂಪಾಯಿಯ 20 ಅಸಲಿ ನೋಟುಗಳು ಒಂದು ಪ್ರಿಂಟರ್ ಮಷಿನ್ 4 ಬಣ್ಣದ ಡಬ್ಬಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖೋಟಾ ನೋಟು ಚಲಾವಣೆ ಮಾಡಲು ಬಂದಿದ್ದ ಗುರುರಾಜ ಕಲ್ಲಯ್ಯ ಪಟ್ಟದಮಠ, ಶಿವಾನಂದ ಕಾರಜೋಳ ಹಾಗೂ ಕನ್ನಡ ಮಾಸಪತ್ರಿಕೆ “ಕನ್ನಡ ಚಂದ” ದ ಪತ್ರಕರ್ತ ಹಾಗೂ ಸಮಾಜ ಸೇವಕ ದತ್ತಾತ್ರೇಯ ಕುಂಬಾರ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


A B Dharwadkar
the authorA B Dharwadkar

Leave a Reply