This is the title of the web page

ನಕಲಿ ರೆಡ್‌ಲೇಬಲ್‌, ಫೆವಿಕ್ವಿಕ್‌ ಸೇರಿ ವಿವಿಧ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ತಂಡದ ಬಂಧನ

ರಾಯಚೂರು, 18- ನಕಲಿ ವಸ್ತುಗಳು ಮಾರಾಟ ಮಾಡುತ್ತಿದ್ದ ಜಾಲವನ್ನು ಹೆಡೆಮುರಿ ಕಟ್ಟಿರುವ ಘಟನೆ ರಾಯಚೂರು ಜಿಲ್ಲೆ ಸಿರಗವಾರದಲ್ಲಿ ನಡೆದಿದೆ.

ಹೈದರಾಬಾದ‌ ಮೂಲದ ಕಿಂಗ್‌ ಪಿನ್‌ ಮೂಲಕ ನಡೆಯುತ್ತಿದ್ದ ಬೃಹತ್‌ ದಂಧೆಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ನಿತ್ಯ ಬಳಕೆ ಮಾಡುವ ಟೀ ಪುಡಿ, ಪ್ಯಾರಾಶೂಟ‌ ಕೊಬ್ಬರಿ ಎಣ್ಣೆ ತಯಾರಿ ಮಾಡಿ ಮಾರಾಟ ಮಾಡುತ್ತಿದ್ದರು. ಇದನ್ನು ತಿಳಿದ ಸಿರವಾರ ಪೊಲೀಸರ ಗೋದಾಮಿನ ಮೇಲೆ ದಾಳಿ ನಡೆಸಿ ಅಕ್ರಮ ಬಯಲಿಗೆಳೆದಿದ್ದಾರೆ. ರತನ್‌ ಸಿಂಗ್‌ ಹಾಗೂ ರಾಘವೇಂದ್ರ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಇಬ್ಬರನ್ನು ವಿಚಾರಣೆ ಮಾಡಿದಾಗ ನಕಲಿ ರೆಡ್‌ಲೇಬಲ್‌ ಟೀ ಪೌಡರ್‌, ಫೆವಿಕ್ವಿಕ್‌ ಸೇರಿ ವಿವಿಧ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಸಿರವಾರ ಪೊಲೀಸರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment