Please assign a menu to the primary menu location under menu

Crime News

“ಮಂದಿರಕ್ಕಾಗಿ ಸತ್ತವರು ಓಬಿಸಿ ಜನ, ಆದರೆ ಟ್ರಸ್ಟನಲ್ಲಿ ಮಾತ್ರ ಬ್ರಾಹ್ಮಣರು” ಎಂದು ಸತೀಶ ಜಾರಕಿಹೊಳಿ ಹೆಸರಲ್ಲಿ ಪೋಸ್ಟ : ದೂರು ದಾಖಲು 


ಬೆಳಗಾವಿ: ಸಾಮಾಜಿಕ ಜಾಲತಾಣದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೆಸರಿನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದವರ ವಿರುದ್ಧ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸತೀಶ ಜಾರಕಿಹೊಳಿ ಹೆಸರಿನಲ್ಲಿ ರಾಮ ಮಂದಿರ ಹೋರಾಟದಲ್ಲಿ ಸತ್ತ ಹೆಚ್ಚಿನವರು ಓಬಿಸಿಗಳು, ಒಬ್ಬನೇ ಒಬ್ಬ ಬ್ರಾಹ್ಮಣ ಸಾಯಲಿಲ್ಲ. ಆದರೆ, ಈಗ ಮಂದಿರದ ಟ್ರಸ್ಟ್‌ನ ಪದಾಧಿಕಾರಿಗಳೆಲ್ಲ ಬ್ರಾಹ್ಮಣರು, ಒಬ್ಬನೂ ಓಬಿಸಿಯವರು ಇಲ್ಲ ಎಂದು ಪೋಸ್ಟ ಮಾಡಲಾಗಿದೆ.

ಪೋಸ್ಟ ಮಾಡಿದವರ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ರಾಜ್ಯಾಧ್ಯಕ್ಷ ವಿಜಯ ತಳವಾರ ಬೆಳಗಾವಿ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದು ಸತೀಶ ಜಾರಕಿಹೊಳಿ ಅವರ ಹೆಸರನ್ನು ಕೆಡಿಸಲು ಹುನ್ನಾರ ಮಾಡಲಾಗಿದೆ ಎಂದು ಅವರ ಅಭಿಮಾನಿಗಳು ಕಿಡಿಕಾರಿದ್ದಾರೆ.


Samadarshi News

Leave a Reply