Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

Crime NewsState News

ಕೌಟುಂಬಿಕ ಜಗಳ; ಗಂಡ, ಹೆಂಡತಿ, ಮಗು ಬಲಿ


ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಪುಟ್ಟ ಮಗು ಸೇರಿ ಮೂವರು ಬಲಿಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮಂಟಮೂರಿ ಗ್ರಾಮದಲ್ಲಿ ನಡೆದಿದೆ.

ಹೊಳೆಪ್ಪ ಮಾರುತಿ ಮಸ್ತಿ (25) ಪತ್ನಿ ವಾಸಂತಿ (22) ಹಾಗೂ ಒಂದೂವರೆ ವರ್ಷದ ಮಗು ಮೃತರು. ಕುಡಿದು ಬಂದು ಕಾಟ ಕೊಡುತ್ತಿದ್ದ ಪತಿಯ ಹಿಂಸೆಗೆ ಬೇಸತ್ತ ಪತ್ನಿ ವಾಸಂತಿ ಪ್ರಶ್ನೆ ಮಾಡಿದ್ದಳು.

ಇದಕ್ಕೆ ಜಗಳವಾಡಿದ್ದ ಪತಿ ಹೊಳೆಪ್ಪ, ಪತ್ನಿಯನ್ನು ಹೆದರಿಸಲು ವಿಷ ಕುಡಿದಿದ್ದ. ವಿಷಯ ತಿಳಿದು ಆತನ ಸ್ನೇಹಿತರು ಹೊಳೆಪ್ಪನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಹೊಳೆಪ್ಪ ಸಾವನ್ನಪ್ಪಿದ್ದ. ಮನನೊಂದ ಪತ್ನಿ ವಾಸಂತಿ ಮಗುವನ್ನು ಕತ್ತು ಹಿಸುಕಿ ಕೊಂದು ತಾನೂ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕಾಕತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Leave a Reply