This is the title of the web page

ಪೆಟ್ರೋಲ, ಕುಡಗೋಲು ತಂದು ಆತ್ಮಹತ್ಯೆಯ ಬೆದರಿಕೆ ಹಾಕುತ್ತಿರುವ ರೈತರು

ಬೆಳಗಾವಿ, 14- ಯೋಜಿತ ಎಸ್ ಟಿ ಪಿ ಯೋಜನೆಗೆ ವಿರೋಧ ವ್ಯಕ ಪಡಿಸಿ ಹಳೆಯ ಪುಣೆ-ಬೆಂಗಳೂರು ರಸ್ತೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದು ಅವರು ತಮ್ಮೊಂದಿಗೆ ಪೆಟ್ರೋಲ, ಕುಡುಗೋಲು ಮುಂತಾದ ಅಪಾಯಕಾರಿ ಅಸ್ತ್ರ ತಗೆದುಕೊಂಡು ಬಂದಿರುವದು ಆತಂಕಕ್ಕೆ ಕಾರಣವಾಗಿದೆ.

ಹಳೆಯ ಪುಣೆ-ಬೆಂಗಳೂರು ರಸ್ತೆ ಹತ್ತಿರದ ಜಲ ಮಂಡಳಿಯ ವತಿಯಿಂದ ಎಸ್‌ಟಿಪಿ ಪ್ಲಾಂಟ್ ನಿರ್ಮಾಣ ಮಾಡಲು ಯೋಚಿಸಲಾಗುತ್ತಿದೆ. ಆದರೆ ರೈತರು ಇದನ್ನು ವಿರೋಧಿಸಿದ್ದಾರೆ.

ಇಂದು ಹರಿಕಾಕಾ ಕಂಪೌಂಡ್ ಬಳಿ ರೈತರು ಈ ಯೋಜನೆಗೆ ವಿರೋಧಿಸಿ ಕೈಯಲ್ಲಿ ಪೆಟ್ರೋಲ್, ಕುಡಗೋಲು ಹಿಡಿದು ಪ್ರತಿಭಟಿಸುತ್ತಿದ್ದು ಹೆಚ್ಚು ಪೊಲೀಸರನ್ನು ಬಂದೋಬಸ್ತಗೆ ನಿಯೋಜಿಸಲಾಗಿದೆ.

ಯೋಜನೆ ರದ್ದು ಪಡಿಸದಿದ್ದರೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.

You might also like
Leave a comment