This is the title of the web page

ಬೆಳಗಾವಿ ಜಿಲ್ಲೆಯ ಯಾವ್ಯಾವ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ದಿ. 28 ರಂದು ಚಾಲನೆ ದೊರೆಯಲಿದೆ ಎಂಬುದನ್ನು ತಿಳಿಯಿರಿ

ಬೆಳಗಾವಿ, 24- ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ ಗಡಕರಿ ಅವರು ಫೆಬ್ರವರಿ 28 ರಂದು ಬೆಳಗಾವಿ ಜಿಲ್ಲೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಐದು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.

ಬೆಳಗಾವಿ ಸಂಸದೆ ಮಂಗಳಾ ಅಂಗಡಿ ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಸೋಮವಾರ ಫೆ.28ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಮಗಾರಿಗಳಿಗೆ  ಗಡಕರಿ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.

ಐದು ಕಾಮಗಾರಿಗಳ ಸದ್ಯದ ಅಂದಾಜು ವೆಚ್ಚ 3972 ಕೋಟಿ ರೂಪಾಯಿ ಇದ್ದು ಒಟ್ಟು 238 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ಚಾಲನೆ ದೊರೆಯಲಿದೆ.

1. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕ ಆರು ಪಥಗಳ ಬೆಳಗಾವಿ-ಸಂಕೇಶ್ವರ 40 ಕಿ.ಮೀ. ಬೈಪಾಸ್ ರಸ್ತೆ,

2. ಸಂಕೇಶ್ವರದಿಂದ ಮಹಾರಾಷ್ಟ್ರ ಗಡಿಯವರೆಗೆ 37.83 ಕಿ.ಮೀ.ವರೆಗೆ ಬೈಪಾಸ್ ರಸ್ತೆ 3014 ಕೋಟಿ ರೂಪಾಯಿ ವೆಚ್ಛದಲ್ಲಿ ಒಟ್ಟು 147 ಕಿ.ಮೀ.

3. 246.77 ಕೋಟಿ ವೆಚ್ಛದಲ್ಲಿ 69 ಕಿ.ಮೀ. ಸಂಕ್ಲೀನ್-ಜಾಂಬೋಟಿ ಬೆಳಗಾವಿ ಎರಡು ಪಥದ ರಸ್ತೆ ಕಾಮಗಾರಿ, ಹಾಗೂ

4. ಪಿಡಬ್ಲುಡಿ ಇಲಾಖೆಯಿಂದ 246.78 ಕೋಟಿ ವೆಚ್ಛದಲ್ಲಿ 80 ಕಿ.ಮೀ ವಿಜಯಪುರ-ಮುರಗುಂಡಿ ರಸ್ತೆ, 90.30 ಕೋಟಿ ವೆಚ್ಛದಲ್ಲಿ 11.62 ಕಿ.ಮೀ. ಹಾಗೂ

5. ಸಿದ್ದಾಪುರ-ವಿಜಯಪುರ ರಸ್ತೆ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದರು.

ಸಚಿವ ಗಡಕರಿ ಅವರ ಜೊತೆಗ ಮುಖ್ಯಮಂತ್ರಿ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ.ಪಾಟೀಲ ಸೇರಿ ಹಲವು ಆಗಮಿಸಲಿದ್ದಾರೆ

ಬೆಳಗಾವಿಯ ರಿಂಗ್ ರೋಡ್ ಬಗ್ಗೆ ಡಿಪಿಆರ್ ಆಗಿದೆ. ನಿತಿನ ಗಡಕರಿ ಅವರು ಇಲ್ಲಿಗೆ ಬಂದಾಗ ಈ ಬಗ್ಗೆ ಮಾತನಾಡುತ್ತೇವೆ. ಅದೇ ರೀತಿ ರಾಯಚೂರು ಬಾಚಿ ರಸ್ತೆ ಪ್ರಕ್ರಿಯೆ ನಡೆದಿದೆ. ಸರ್ವೆ ಕೆಲಸ ಕೂಡ ಮುಗಿದಿದೆ ಎಂದು ಸಂಸದೆ ಮಂಗಲಾ ಅಂಗಡಿ ಮಾಹಿತಿ ನೀಡಿದರು.

You might also like
Leave a comment