This is the title of the web page

ಫಿನ್ ಲ್ಯಾಂಡ್ ಜಗತ್ತಿನ ಅತ್ಯಂತ ಸಂತೋಷದಾಯಕ ದೇಶ

 

ಹೆಲ್ಸಿಂಕಿ (ಫಿನ್ ಲ್ಯಾಂಡ್), 19- ವೈಯಕ್ತಿಕ ಯೋಗಕ್ಷೇಮ, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಬೆಂಬಲದ ಮಾನದಂಡಗಳ ಮೇಲೆ ನಿರ್ಧರಿಸಲಾಗುವ ಜನರು ಅತ್ಯಂತ ಸಂತೋಷದಿಂದ ಜೀವಿಸುವ ದೇಶಗಳ ಪಟ್ಟಿಯಲ್ಲಿ ಫಿನ್​ಲ್ಯಾಂಡ್​ ಮೊದಲ ಸ್ಥಾನದಲ್ಲಿದ್ದು ಭಾರತ 136ನೇ ಸ್ಥಾನದಲ್ಲಿದೆ. ಪುಟ್ಟ ದೇಶ ಫಿನ್ ಲ್ಯಾಂಡ್ ಸತತವಾಗಿ ಐದನೇ ಬಾರಿಗೆ ಈ ಪಟ್ಟವನ್ನು ತನ್ನದಾಗಿಸಿಕೊಂಡಿದೆ.

ಈ ಪಟ್ಟಿಯಲ್ಲಿ ಅತ್ಯಂತ ಹೆಚ್ಚು ಅತೃಪ್ತಿಕರ ದೇಶ ಎಂದು ಅಫ್ಘಾನಿಸ್ತಾನ ಕರೆಯಿಸಿಕೊಂಡರೆ, ಲೆಬನಾನ್​ ನಂತರದ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಝಿಂಬಾಬ್ವೆ ಇದೆ.

ಶುಕ್ರವಾರ ಬಿಡುಗಡೆಯಾದ “ವರ್ಲ್ಡ್​ ಹ್ಯಾಪಿನೆಸ್”​ ಪಟ್ಟಿಯಲ್ಲಿ ಉತ್ತರ ಯುರೋಪ್​ ದೇಶಗಳು ಮುನ್ನಡೆ ಸಾಧಿಸಿವೆ. ಫಿನ್​ಲ್ಯಾಂಡ್​ ಅತ್ಯಂತ ಸುಖಿ ದೇಶವಾಗಿದ್ದರೆ ಐಸ್ಲ್ಯಾಂಡಿಕ್, ಸ್ವಿಟ್ಜರಲ್ಯಾಂಡ್ ಮತ್ತು ಹಾಲೆಂಡ್‌ ನಂತರದ ಸ್ಥಾನ ಪಡೆದುಕೊಂಡಿವೆ.2022 ರ ಈ ಪಟ್ಟಿಯಲ್ಲಿ ಭಾರತವು ಪಟ್ಟಿಯ ಮೇಲ್ಭಾಗಕ್ಕಿಂತ ಕೆಳಭಾಗಕ್ಕೆ ಹತ್ತಿರದಲ್ಲಿದೆ. ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕಾದಂತಹ ದೇಶಗಳಿಗಿಂತ ಭಾರತ ಕೆಳಗಿದೆ. 146 ಶ್ರೇಯಾಂಕಿತ ದೇಶಗಳಲ್ಲಿ ಭಾರತವು ನಂ. 136 ನೇ ಸ್ಥಾನದಲ್ಲಿದೆ. ನೇಪಾಳ 84 ನೇ ಸ್ಥಾನದಲ್ಲಿದೆ, ಬಾಂಗ್ಲಾ ದೇಶ 94, ಪಾಕಿಸ್ತಾನ 121 ಮತ್ತು ಶ್ರೀಲಂಕಾ 127ನೇ ಸ್ಥಾನದಲ್ಲಿದೆ.

ಪಟ್ಟಿಯಲ್ಲಿ ಅಮೆರಿಕ 16ನೇ ಸ್ಥಾನದಲ್ಲಿದ್ದರೆ, ಬ್ರಿಟನ್​ 15, ಫ್ರಾನ್ಸ​ 20 ನೇ ಸ್ಥಾನದಲ್ಲಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ಆಕ್ರಮಿಸಿಕೊಂಡ ಬಳಿಕ ದೇಶ ಆರ್ಥಿಕವಾಗಿ ನಷ್ಟ ಅನುಭವಿಸಿದ್ದಲ್ಲದೇ ವೈಯಕ್ತಿಕ ಸ್ವಾತಂತ್ರ್ಯ ಹರಣವಾಗಿದ್ದರಿಂದ ಈ ದೇಶ ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದೆ. ಇದಲ್ಲದೇ ಆರ್ಥಿಕ ಬಿಕ್ಕಟ್ಟಿಗೆ ಗುರಿಯಾಗಿರುವ ಲೆಬನಾನ್​, ವೆನಿಜುವೆಲಾ ನಂತರದ ಅತ್ಯಂತ ಅತೃಪ್ತ ದೇಶಗಳಾಗಿವೆ.

You might also like
Leave a comment