This is the title of the web page

ಹಲಸಿಯಲ್ಲಿ ಕನ್ನಡ ಧ್ವಜಕ್ಕೆ ಬೆಂಕಿ

ಬೆಳಗಾವಿ, 20- ಅನಗೋಳನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಒಡೆದ ಘಟನೆಯ ನಂತರ ಈಗ ಖಾನಾಪುರ ತಾಲೂಕಿನ ಹಲಸಿ ಗ್ರಾಮದಲ್ಲಿ ನಾಡದ್ರೋಹಿ ದುಷ್ಕರ್ಮಿಗಳು ಕನ್ನಡ ಬಾವುಟವನ್ನು ಸುಟ್ಟು ಹಾಕಿದ್ದಾರೆ.

ಹಲಸಿ ಗ್ರಾಮ ಪಂಚಾಯತ ಕಚೇರಿ ಕಟ್ಟಡದ ಮೇಲೆ ಕನ್ನಡ ಧ್ವಜ ಸ್ಥಾಪಿಸಲಾಗಿತ್ತು, ಅದನ್ನು ನಿನ್ನೆ ರಾತ್ರಿ ಬೆಂಕಿಹಚ್ಚಿ ಸುಡಲಾಗಿದೆ.

ಸ್ಥಳಕ್ಕೆ ನಂದಗಡ ಪೊಲೀಸರು ಧಾವಿಸಿದ್ದಾರೆ.

You might also like
Leave a comment