This is the title of the web page

ಸಾಲ ಕೊಡದ ಬ್ಯಾಂಕ್ ಗೆ ಬೆಂಕಿ

ಹಾವೇರಿ, 9- ಸಾಲ ಕೇಳಿ ಬ್ಯಾಂಕ್ ಗೆ ನೀಡಿದ್ದ ಅಪ್ಲಿಕೇಶನ್ ತಿರಸ್ಕೃತಗೊಂಡದಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಬ್ಯಾಂಕ್ ಗೆ ಬೆಂಕಿ ಹಚ್ಚಿದ ಘಟನೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಹೆಡ್ಡಿಗೊಂಡ ಗ್ರಾಮದಲ್ಲಿ ಇಂದು ಬೆಳಗಿನಜಾವ ಸಂಭವಿಸಿದೆ.

33 ವರುಷದ ವಾಸೀಮ ಮುಲ್ಲಾ ಗ್ರಾಮದ ಕೆನರಾ ಬ್ಯಾಂಕ್ ಗೆ ಸಾಲಕ್ಕಾಗಿ ಅಪ್ಲಿಕೇಶನ್ ಸಲ್ಲಿಸಿದ್ದರು. ಆದರೆ ಅದು ತೀರಸ್ಕೃತಗೊಂಡಿತ್ತು. ಇದರಿಂದ ಕೋಪಗೊಂಡ ವಾಸೀಮ ಬ್ಯಾಂಕ್ ನ ಕಿಟಕಿಯ ಗ್ಲಾಸ್ ಒಡೆದು ಒಳಗೆ ಹೋಗಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹೊರಗೆ ಬರುವಾಗ ಜನರ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ಕುರ್ಚಿ, ಮೇಜು, ಕಾಗದ ಪತ್ರಗಳು ಬೆಂಕಿಯಿಂದ ಸುಟ್ಟಿವೆ. “ನನಗೆ ಸಾಲ ನೀಡದಿರುವದಕ್ಕೆ ಯಾವುದೇ ಸೂಕ್ತ ಕಾರಣಗಳಿಲ್ಲ. ಎಲ್ಲ ದಾಖಲೆಗಳಿದ್ದರೂ ಬೇಕೆಂದೇ ಸಾಲ ನೀಡಿಲ್ಲ, ಅದಕ್ಕೆ ಹೀಗೆ ಮಾಡಿದೆ” ಎಂದು ವಾಸೀಮ ತನ್ನನ್ನು ಹಿಡಿದವರಿಗೆ ಹೇಳಿದ್ದಾನೆ.

You might also like
Leave a comment