This is the title of the web page

ಬೆಳಗಾವಿ ಉದ್ಯಮಿಯ ಕೊಲೆ ಆರೋಪಿಗೆ ಗುಂಡೇಟು 

 

ಬೆಳಗಾವಿ: ಬೆಳ್ಳಂಬೆಳಿಗ್ಗೆ ಬೆಳಗಾವಿಯಲ್ಲಿ ಗುಂಡಿನ ಸದ್ದು ಮೊಳಗಿದ್ದು ಬೆಳಗಾವಿಯ ಉದ್ಯಮಿಯ ಕೊಲೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿ ವಿಶಾಲ ಸಿಂಗ್ ಚೌವ್ಹಾಣ ಮೇಲೆ ಬೆಳಗಾವಿ ಎಸಿಪಿ ನಾರಾಯಣ ಬರಮನಿ ಗುಂಡು ಹಾರಿಸಿದ್ದಾರೆ.

ಕೊಲೆ ಆರೋಪಿ ವಿಶಾಲ ಸಿಂಗ್ ಚೌವ್ಹಾಣ್ ಇರುವ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲು ತೆರಳಿದ ಎಸಿಪಿ ಬರಮನಿ ತಂಡವು ಬೈಕ್ ಮೇಲೆ ಪರಾರಿಯಾಗುತ್ತಿದ್ದ ವಿಶಾಲ ಸಿಂಗ್ ಗೆ ಶರಣಾಗುವಂತೆ ತಿಳಿಸಿದ್ದಾರೆ.

ಈ ವೇಳೆ ಪೋಲಿಸ್ ಪೇದೆಯೊಬ್ಬರ ಮೇಲೆ ಆರೋಪಿ ವಿಶಾಲ ಸಿಂಗ್ ಹಲ್ಲೆ ಮಾಡಲು ಮುಂದಾಗುತ್ತಿದ್ದಂತೆ ಎಸಿಪಿ ನಾರಾಯಣ ಬರಮನಿ ಆರೋಪಿ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿ, ಬಂಧಿಸಿದ್ದಾರೆ.

ಎರಡು ತಿಂಗಳ ಹಿಂದೆ ನಡೆದ ಬೆಳಗಾವಿ ಉದ್ಯಮಿ ರಾಜು ದೊಡಬೊಮ್ಮನವರ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ವಿಶಾಲ ಸಿಂಗ್ ಚೌವ್ಹಾಣ ಮೇಲೆ ಕರ್ನಾಟಕ , ಮಹಾರಾಷ್ಟ್ರದಲ್ಲಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. ಸದ್ಯ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

 

You might also like
Leave a comment