This is the title of the web page

ಮಸೀದಿ ಮೇಲೆ ಭಗವಾ ಧ್ವಜ ಕಟ್ಟಿದ ದುಷ್ಕರ್ಮಿಗಳು

ಬೆಳಗಾವಿ, ೧೧- ಮೂಡಲಗಿ ತಾಲೂಕಿನ ಅರಭಾವಿ ಗ್ರಾಮದ ಸತ್ತಿಗೇರಿ ಮಡ್ಡಿ ತೋಟದ ಮಸೀದಿಯ ಮೇಲೆ ಬುಧವಾರ ಮುಂಜಾನೆ ಕೇಸರಿ ಬಾವುಟ ಕಂಡು ಬಂದಿದ್ದು, ಗ್ರಾಮಸ್ಥರು ಅದನ್ನು ತೆರವುಗೊಳಿಸಿದ್ದಾರೆ.

ಅಪರಿಚಿತ ದುಷ್ಕರ್ಮಿಗಳು ಮಸೀದೆಯ  ಮಿನಾರ್ ಗೆ ಭಗವಾ ಧ್ವಜ ಕಟ್ಟಿದ್ದು, ಮುಂಜಾನೆ ಮುಸ್ಲಿಮರು ಪ್ರಾರ್ಥನೆಗೆ ತೆರಳಿದಾಗ ಇದು ಬೆಳಕಿಗೆ ಬಂದಿದೆ.

ಬೆಳಿಗಿನ ಜಾವ 3.30ರಿಂದ 5.30ರವರೆಗೆ ಕಿಡಿಗೇಡಿಗಳು ಧ್ವಜ ಕಟ್ಟಿರುವದೆಂದು ಅಂದಾಜಿಸಲಾಗಿದ್ದು ಮಸೀದಿ ಮೇಲೆ ಭಗವಾ ಧ್ವಜ ಕಟ್ಟಿದ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ ಹಿಂದೂ ಮತ್ತು ಮುಸ್ಲಿಂ ಹಿರಿಯರು ಸೇರಿ ಧ್ವಜ ತೆರವುಗೊಳಿಸಿದ್ದಾರೆ.

ಯಾರು ಧ್ವಜ ಕಟ್ಟಿದ್ದಾರೆ ಎಂಬುದು ಇದುವರೆಗೂ ತಿಳಿದು ಬಂದಿಲ್ಲ. ಈಗ ಸದ್ಯ ಸ್ಥಳದಲ್ಲಿ ವಾತಾವರಣ ಶಾಂತವಿದ್ದು, ಪೊಲೀಸರು ಬಿಗಿ ಬಂದೋಬಸ್ತ ಕೈಗೊಂಡಿದ್ದಾರೆ.

You might also like
Leave a comment