Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ಜಿಹಾದ್ ಕೇವಲ ಇಸ್ಲಾಮನಲ್ಲಿ ಮಾತ್ರವಲ್ಲ ಭಗವದ್ಗೀತೆ, ಕ್ರೈಸ್ತ ಧರ್ಮದಲ್ಲೂ ಇದೆ : ಮಾಜಿ ಕೇಂದ್ರ ಗೃಹ ಸಚಿವ 


ಹೊಸದಿಲ್ಲಿ : ಜಿಹಾದ್ ಅನ್ನುವುದು ಕೇವಲ ಇಸ್ಲಾಮನಲ್ಲಿ ಮಾತ್ರವಲ್ಲ ಭಗವದ್ಗೀತೆ ಹಾಗೂ ಕ್ರೈಸ್ತ ಧರ್ಮದಲ್ಲೂ ಇದೆ ಎಂದು ಮಾಜಿ ಕೇಂದ್ರ ಸಚಿವ ಶಿವರಾಜ ಪಾಟೀಲ ಹೇಳಿಕೆ ನೀಡಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಶಿವರಾಜ ಪಾಟೀಲ ಅವರು ಮೊಹ್ಸೀನಾ ಕಿದ್ವಾಯಿ ಅವರ ಆತ್ಮ ಚರಿತ್ರೆ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಇಸ್ಲಾಮನಲ್ಲಿನ ಜಿಹಾದ್ ಕುರಿತು ವ್ಯಾಪಕ ಚರ್ಚೆಯಾಗುತ್ತಿದೆ. ಆದರೆ ಮಹಾಭಾರತದಲ್ಲಿ ಶ್ರೀ ಕೃಷ್ಣನು ಅರ್ಜುನನ ಬಳಿ ಜಿಹಾದ್ ಕುರಿತು ಮಾತನಾಡಿದ್ದಾನೆ ಎಂದು ಹೇಳಿದ್ದಾರೆ.

ಕೇಂದ್ರದ ಮಾಜಿ ಗೃಹ ಸಚಿವ ಶಿವರಾಜ ಪಾಟೀಲ ಅವರ ಹೇಳಿಕೆ ಕುರಿತು ಕಿಡಿ ಕಾರಿರುವ ಬಿಜೆಪಿ, ಇದು ವೋಟ್ ಬ್ಯಾಂಕ್ ರಾಜಕಾರಣ ಎಂದು ಹೇಳಿದೆ.


A B Dharwadkar
the authorA B Dharwadkar

Leave a Reply