This is the title of the web page

ಮೊದಲ ಬಾರಿಗೆ ಶಾಲೆಗಳಲ್ಲಿ ಸಮವಸ್ತ್ರ ಪರಿಚಯಿಸಿದ್ದ ಮಾಜಿ ಸಚಿವ ಎಂ. ರಘುಪತಿ ಇನ್ನಿಲ್ಲ 

 

ಬೆಂಗಳೂರು, ೧೮- ರಾಜ್ಯದ ಶಾಲೆಗಳಲ್ಲಿ ಮೊಟ್ಟ ಮೊದಲ ಬಾರಿಗೆ ಸಮವಸ್ತ್ರ ಪರಿಚಯಿಸಿದ್ದ ಮಾಜಿ ಸಚಿವ ಎಂ. ರಘುಪತಿ ಅವರು ಇಂದು ಬೆಳಗ್ಗೆ 3 ಗಂಟೆ ಸುಮಾರಿಗೆ ವಿಧಿವಶರಾಗಿದ್ದಾರೆ.

ಮಾಜಿ ಸಚಿವ ರಘುಪತಿ ಅವರ ಪಾರ್ಥೀವ ಶರೀರವನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ನಿವಾಸದಲ್ಲಿ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

1980ರಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಂ. ರಘುಪತಿ ಅವರು ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಶಾಲೆಗಳಲ್ಲಿ ಮೊಟ್ಟ ಮೊದಲ ಬಾರಿಗೆ ಸಮವಸ್ತ್ರ ಪರಿಚಯಿಸಿದ್ದರು.

You might also like
Leave a comment