Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Local News

ಎಂಇಎಸ್ ಮಹಾಮೇಳದ ಗಲಭೆ; ಕೇಂದ್ರದ ಮಾಜಿ ಸಚಿವ ಕದಮ್ ಖಾನಾಪುರ ನ್ಯಾಯಾಲಯಕ್ಕೆ ಹಾಜರು


ಖಾನಾಪುರ :2006 ರಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ಖಾನಾಪುರದಲ್ಲಿ ಏರ್ಪಡಿಸಿದ್ದ ಮಹಾಮೇಳಾವ ಸಭೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ್ದ ಕೇಂದ್ರದ ಮಾಜಿ ಸಚಿವ, ಶಿವಸೇನೆ ಮುಖಂಡ ರಾಮದಾಸ ಕದಂ ಅವರು ಇಂದು ಮಧ್ಯಾಹ್ನ ಖಾನಾಪುರ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ಕರ್ನಾಟಕ ಸರಕಾರ ಬೆಳಗಾವಿಯಲ್ಲಿ ನಡೆಸಿದ್ದ ವಿಧಾನ ಮಂಡಳ ಅಧಿವೇಶನಕ್ಕೆ ಪ್ರತಿಯಾಗಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಬೆಳಗಾವಿ ಮತ್ತು ಖಾನಾಪುರ ನಲ್ಲಿ ಅಕ್ಟೋಬರ 26, 2006 ರಲ್ಲಿ “ಮಹಾ ಮೆಳಾವಾ” ಸಭೆ ನಡೆಸಿ, ಮರಾಠಿ ಪರ ಒಲವಿರುವ ಮಹಾರಾಷ್ಟ್ರದ ಮುಖಂಡರ ಭಾಷಣ ಏರ್ಪಡಿಸಿತ್ತು.

ಖಾನಾಪುರನ ತಾರಾರಾಣಿ ಹೈ ಸ್ಕೂಲ್ ಆವರಣದಲ್ಲಿ ನಡೆದ ಸಭೆಯಲ್ಲಿ ರಾಮದಾಸ ಕದಮ್ ಮತ್ತು ಸಾತಾರ ಕೃಷಿ ವಿಶ್ವ ವಿದ್ಯಾಲಯದ ಪ್ರೊಫೆಸರ್ ನಿತಿನ ಪಾಟೀಲ ಅವರುಗಳು ಉದ್ರೇಕಕಾರಿ ಮತ್ತು ರಾಜ್ಯ ಸರಕಾರದ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ್ದರು.

ಸಭೆ ಮುಗಿದ ತರುವಾಯ ಇವರ ಭಾಷಣ ಕೇಳಿ ಉದ್ರೇಕಗೊಂಡ ಜನರು ಕರ್ನಾಟಕದ ಪೋಲೀಸರ ಮೇಲೆ ಮತ್ತು ಕರ್ನಾಟಕದಿಂದ ಖಾನಾಪುರ ಕಡೆಗೆ ತೆರಳಿದ್ದ ಸರಕಾರಿ ಬಸ್ ಸೇರಿದಂತೆ ಕರ್ನಾಟಕದ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ, ಹಿಂಸಾಚಾರ ಮಾಡಿದ್ದರು. ಈ ಘಟನೆಯಲ್ಲಿ ನಾಗರಿಕರನ್ನು ಹೊರತು ಪಡಿಸಿ 20 ಪೊಲೀಸರೇ ಗಾಯಗೊಂಡಿದ್ದರು.

ಇದಕ್ಕೆಲ್ಲ ನಾಯಕರ ಭಾಷಣವೇ ಕಾರಣವೆಂದು ಖಾನಾಪುರ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಇವರಿಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ 153 ಮತ್ತು 153 (A) ಅನ್ವಯ ದೂರು ದಾಖಲಾಗಿದೆ.

ಹಿಂದಿನ ದಿನಗಳ ಕರೆಗೆ ಗೈರಾಗಿದ್ದರಿಂದ ಅರೆಸ್ಟ್ ಅವರ ವಾರೆಂಟ್ ಹೊರಡಿಸಲಾಗಿತ್ತು. ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ನವೆಂಬರ 30ಕ್ಕೆ ಮುಂದೂಡಿದೆ.


A B Dharwadkar
the authorA B Dharwadkar

Leave a Reply