Please assign a menu to the primary menu location under menu

Local News

ಗಣೇಶೋತ್ಸವ ಆಚರಣೆ; ಶಾಸಕರ ನೇತೃತ್ವದಲ್ಲಿ ಮಹಾಮಂಡಳ ಸಭೆ


ಬೆಳಗಾವಿ : ಲೋಕಮಾನ್ಯ ಟಿಳಕ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳ ವತಿಯಿಂದ ನಗರದ ಶ್ರೀ ಸಮಾದೇವಿ ಮಂಗಲ ಕಾರ್ಯಾಲಯದಲ್ಲಿ ಮುಂಬರುವ ಗಣೇಶೋತ್ಸವ ನಿಮಿತ್ಯ ಬೆಳಗಾವಿಯ ಎಲ್ಲ ಗಣೇಶೋತ್ಸವ ಮಂಡಳದ ಪದಾಧಿಕಾರಿಗಳೊಂದಿಗೆ ಸಭೆ ಏರ್ಪಡಿಸಲಾಗಿತ್ತು.

ಜಿಲ್ಹಾಧಿಕಾರಿ, ನಗರ ಪೊಲೀಸ ಆಯುಕ್ತ, ಮಹಾನಗರಪಾಲಿಕೆ ಆಯುಕ್ತ, ಹೆಸ್ಕಾಂ, ಕ್ಯಾಂಟೋನ್ಮೇಂಟ ಬೋರ್ಡ, ಜಲ ಮಂಡಳಿ, ಎಲ್ ಆಂಡ್ ಟಿ, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ಗಣೇಶೋತ್ಸವ ಮಂಡಳಗಳ ಕುಂದುಕೊರತೆ ಹಾಗೂ ಅವಶ್ಯಕತೆಗಳನ್ನು ಆರಿಸಿ ಶೀಘ್ರದಲ್ಲೆ ಶಾಸಕರ ಕೋರಿಕೆ ಮೇರೆಗೆ ಕೆಲಸ ಪ್ರಾರಂಭಿಸುವುದಾಗಿ ತಿಳಿಸಿದರು.

ಪ್ರಮುಖವಾಗಿ ಗಣೇಶೋತ್ಸವ ಮಂಡಳಗಳಿಗೆ ಬೇಕಾಗುವ ಅನುಮತಿ ಪತ್ರಗಳನ್ನು ಸಿಂಗಲ್ ವಿಂಡೊ ಮುಖಾಂತರ ಅನುಷ್ಠಾನಗೊಳಿಸಿ ಅನುಕೂಲ ಮಾಡಿಕೊಡಲಾಗುವುದು, ನಗರದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಆರ್.ಓ.ಪ್ಲಾಂಟ್ ಚಾಲ್ತಿಗೊಳಿಸಿ ಗಣೇಶೋತ್ಸವ ಸಂದರ್ಭದಲ್ಲಿ 11 ದಿನ ಉಚಿತ ನೀರಿನ ವ್ಯವಸ್ಥೆ, ಸಾರ್ವಜನಿಕ ಶೌಚಾಲಯ, ವಿದ್ಯುತ್ ದೀಪಗಳ ಅಳವಡಿಕೆ, ಸಂಶಯಾಸ್ಪದ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ನಿಯುಕ್ತಿ, ಸಿಸಿಟಿವ್ಹಿ ಕ್ಯಾಮರಾ ಅಳವಡಿಕೆ, ಮೆರವಣಿಗೆ ರಸ್ತೆಗಳ ದುರುಸ್ತಿಕರಣ, ಇಲೆಕ್ಟ್ರಿಕ್ ಕಂಬಗಳ ಅಳವಡಿಕೆ, ಸ್ವಚ್ಛ ಭಾರತ ಹಾಗೂ ಸ್ಮಾರ್ಟ ಸಿಟಿ ಅಡಿಯಲ್ಲಿ ಡಸ್ಟ ಬಿನ್‍ಗಳ ಬಳಿಕೆ, ಹೆಸ್ಕಾಂ ವತಿಯಿಂದ ಮಂಡಳಗಳಿಗೆ ಮೀಟರ ಅಳವಡಿಕೆಯಲ್ಲಿ ರಿಯಾಯತಿ, ಗಣಪತಿ ಪ್ರತಿಷ್ಠಾಪಣೆ ಹಾಗೂ ವಿಸರ್ಜಣೆ ಸಂದರ್ಭದಲ್ಲಿ ಹೆಸ್ಕಾಂ ಅಧಿಕಾರಿಗಳಿಂದ ಹೆಚ್ಚುವರಿ ಲೈನಮ್ಯಾನ ನಿಯುಕ್ತಿ, ಪಾರ್ಕಿಂಗ ವ್ಯವಸ್ಥೆ, ಪೊಲೀಸ ಇಲಾಖೆ ವತಿಯಿಂದ ಕಾನೂನು ವ್ಯವಸ್ಥೆ, 24 ಅಂಗಡಿ ಮುಂಗಟ್ಟುಗಳ ಚಾಲನೆ ಹಾಗೂ ಧ್ವನಿವರ್ಧಕಗಳ ಬಳಿಕೆಗೆ ಅವಕಾಶ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಿ ಶೀಘ್ರದಲ್ಲೆ ಅನುಷ್ಠಾನಕ್ಕೆ ತರಲು ಎಲ್ಲ ಗಣೇಶೋತ್ಸವ ಮಂಡಳ, ಮಹಾಮಂಡಳ ಹಾಗೂ ಶಾಸಕ ಅನಿಲ ಬೆನಕೆ ಅವರಿಂದ ಸೂಚಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಹಾಧಿಕಾರಿ ನಿತೇಶ ಪಾಟಿಲ, ನಗರ ಪೊಲೀಸ ಆಯುಕ್ತ ಡಾ. ಬೊರಲಿಂಗಯ್ಯಾ, ಮಹಾನಗರಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಹೆಸ್ಕಾಂ ಅಧಿಕಾರಿ ಅಮ್ಮನ್ನವರ, ಎಸ್.ಇ. ಲಕ್ಷ್ಮೀ ನಿಪ್ಪಾಣಕರ, ಎಲ್ ಆಂಡ್ ಟಿ ಅಧಿಕಾರಿ ಹಾರ್ದಿಕ ದೇಸಾಯಿ, ಕ್ಯಾಂಟೋನ್ಮೇಂಟ ಬೊರ್ಡ, ಜಲ ಮಂಡಳಿ, ಅಗ್ನಿಶಾಮಕ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಲೋಕಮಾನ್ಯ ಟಿಳಕ ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ವಿಜಯ ಜಾಧವ ಸೇರಿದಂತೆ ಪದಾಧಿಕಾರಿಗಳಾದ ರಾಜು ಖಟಾವಕರ, ಅರ್ಜುನ ರಜಪುತ, ರವಿ ಕಲಘಟಗಿ, ನಿತಿನ ಜಾಧವ, ಹೇಮಂತ ಹಾವಳ, ಶರದ ಪಾಟೀಲ, ಶಂಕರ ಪಾಟೀಲ ಹಾಗೂ ಸೌರಭ ಸಾವಂತ ಉಪಸ್ಥಿತರಿದ್ದರು.


Samadarshi News

Leave a Reply