Please assign a menu to the primary menu location under menu

National

ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಗೌತಮ ಅದಾನಿ


ಹೊಸದಿಲ್ಲಿ :, ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ಹಾಗು ಅದಾನಿ ಗ್ರೂಪ್ ಅಧ್ಯಕ್ಷರಾದ ಗುಜರಾತ್ ಮೂಲದ ಗೌತಮ ಅದಾನಿ ಅವರು ಮೈಕ್ರೋಸಾಫ್ಟ ಸಹ-ಸಂಸ್ಥಾಪಕ ಬಿಲ್ ಗೇಟ್ಸ ಮತ್ತು ಬರ್ನಾರ್ಡ ಅರ್ನಾಲ್ಟ ಅವರನ್ನು ಹಿಂದಿಕ್ಕಿ ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಅದಾನಿ ಅವರು ಕ್ಷಿಪ್ರಗತಿಯಲ್ಲೇ 137.4 ಬಿಲಿಯನ್ ಡಾಲರ್‌ ಒಟ್ಟು ಸಂಪತ್ತನ್ನು ಹೊಂದಿದ್ದಾರೆ.

ಬ್ಲೂಮ‌ಬರ್ಗ ಬಿಲಿಯನೇರ್ಸ ಇಂಡೆಕ್ಸ ಶ್ರೇಯಾಂಕದಲ್ಲಿ ಗೌತಮ ಅದಾನಿ ಈಗ ಎಲೋನ್ ಮಸ್ಕ ಮತ್ತು ಜೆಫ್ ಬೆಜೋಸ ಅವರನ್ನು ಹಿಂದಿಕ್ಕಿದ್ದಾರೆ.

ಫ್ರೆಂಚ್ ಉದ್ಯಮಿ, ಹೂಡಿಕೆದಾರ ಮತ್ತು ಕಲಾ ಸಂಗ್ರಾಹಕ ಬರ್ನಾರ್ಡ ಅರ್ನಾಲ್ಟ ಈಗ ವಿಶ್ವದ 4 ನೇ ಶ್ರೀಮಂತ ವ್ಯಕ್ತಿಯಾಗಿ ಸಂಪತ್ತಿನಲ್ಲಿ ಕುಸಿತ ಕಂಡಿದ್ದಾರೆ. ವಿಶ್ವದ ಅತಿದೊಡ್ಡ ಐಷಾರಾಮಿ ಸರಕುಗಳ ಕಂಪನಿಯಾಗಿರುವ ಲೂಯಿ ವಿಟಾನ್  ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರು ಆಗಿದ್ದಾರೆ.

ಇತ್ತೀಚಿನ ಸಂಪತ್ತಿನ ಏರಿಕೆಯೊಂದಿಗೆ ಶ್ರೀಮಂತಿಕೆಯಲ್ಲಿ ಅದಾನಿ ವಿಶ್ವದ ಮೂರನೇ ಸ್ಥಾನಕ್ಕೆ ಏರಿದ ಮೊದಲ ಭಾರತೀಯ ಮತ್ತು ಏಷ್ಯನ್ ಆಗಿದ್ದಾರೆ. ರಿಲಯನ್ಸ ಅಧ್ಯಕ್ಷ ಮುಕೇಶ ಅಂಬಾನಿ ಮತ್ತು ಚೀನಾದ ಜಾಕ್ ಮಾ ಕೂಡ ಇದನ್ನು ಸಾಧಿಸಲು ಸಾಧ್ಯವಾಗಿರಲಿಲ್ಲ.
ಕಳೆದ ತಿಂಗಳು ಬಿಲ್ ಗೇಟ್ಸ ಅವರನ್ನು ಹಿಂದಿಕ್ಕಿ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಅದಾನಿ ಹೊರ ಹೊಮ್ಮಿದ್ದಾರೆ.

ಅದಾನಿ ಅವರು ಮೂರನೇ ಸ್ಥಾನಕ್ಕೆ ಏರಲು ಇದು ವರೆಗೆ ಆಗಿರುವ ಅವರ ಸಂಪತ್ತಿನ ಭಾರಿ ಏರಿಕೆಯ ಪರಿಣಾಮವಾಗಿದೆ. ಟಾಪ್ 10 ರಲ್ಲಿರುವ ಎಲ್ಲಾ ಇತರ ಬಿಲಿಯನೇರ್‌ಗಳು ಈ ವರ್ಷದಲ್ಲಿ ಸಂಪತ್ತಿನಲ್ಲಿ ಕುಸಿತವನ್ನು ಕಂಡಿದ್ದರೆ, ಅದಾನಿ ಅವರ ಸಂಪತ್ತು 60.9 ಶತಕೋಟಿ ಡಾಲರ್‌ಗಳಷ್ಟು ಹೆಚ್ಚಾಗಿದೆ. ಈ ಮೊತ್ತವೂ ಇತರ ಉಳಿದ ಬಿಲೇನಿಯರ್‌ಗಿಂತ ಐದು ಪಟ್ಟು ಹೆಚ್ಚಾಗಿದೆ.


Samadarshi News

Leave a Reply