Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Entertainment News

ʼಆದಿಪುರುಷʼ ನಿರ್ದೇಶಕನಿಗೆ 4 ಕೋಟಿ ಮೌಲ್ಯದ ಫೆರಾರಿ ಸೂಪರ್‌ ಕಾರ್ ಗಿಫ್ಟ್…!


ಮುಂಬೈ, ೧೯- ಹಿಂದಿಯ ಮುಂಬರುವ ಬಹುಭಾಷಾ ಸಿನಿಮಾ “ಆದಿಪುರುಷ” ಕ್ಕೆ ಹಣಕಾಸು ಒದಗಿಸುತ್ತಿರುವ ಟಿ-ಸೀರೀಸ್ ಮುಖ್ಯಸ್ಥ ಭೂಷಣ ಕುಮಾರ ಅವರು ಚಿತ್ರದ ನಿರ್ದೇಶಕನಿಗೆ ದೊಡ್ಡ ಉಡುಗೊರೆ ನೀಡಿದ್ದಾರೆ.

ಓಂ ರಾವತ‌ ಈ ಚಿತ್ರದ ನಿರ್ದೇಶಕ. ಅವರಿಗೆ ಕೆಂಪು ಬಣ್ಣದ ಫೆರಾರಿ ಎಫ್8 ಟ್ರಿಬ್ಯೂಟೊ ಸೂಪರ್‌ ಕಾರನ್ನು ಉಡುಗೊರೆಯಾಗಿ ನೀಡಿದ್ದು, ವರದಿಗಳ ಪ್ರಕಾರ ಸೂಪರ್ ಐಷಾರಾಮಿ ವಾಹನದ ಬೆಲೆ 4.02 ಕೋಟಿ ರೂ. ಆಗಿದೆ.

ಕಾರು ಶೋರೂಮ್‌ನಿಂದ ನೇರವಾಗಿ ಅವರಿಗೆ ಹೋಗಿಲ್ಲ, ಬದಲಿಗೆ ಅದನ್ನು ಭೂಷಣ ಕುಮಾರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಕುಮಾರ ಅವರು ತಮ್ಮ ಸಹೋದ್ಯೋಗಿಗಳಿಗೆ ದುಬಾರಿ ಕಾರುಗಳು ಮತ್ತು ಉಡುಗೊರೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ.

ಈ ವರ್ಷದ ಆರಂಭದಲ್ಲಿ ‘ಭೂಲ ಭುಲೈಯಾ 2’ ಸೂಪರ್ ಯಶಸ್ಸಿನ ನಂತರ, ಭೂಷಣ ಕುಮಾರ ಅವರು ಕಾರ್ತಿಕ ಆರ್ಯನ್ ಅವರಿಗೆ 4.70 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಆರೆಂಜ್ ಮೆಕ್ಲಾರೆನ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಆದಿಪುರುಷನಲ್ಲಿ ಭಗವಾನ್ ರಾಮನಾಗಿ ಪ್ರಭಾಸ, ಸೀತೆಯಾಗಿ ಕೃತಿ ಸನೋನ್, ಲಕ್ಷ್ಮಣನಾಗಿ ಸನ್ನಿ ಸಿಂಗ್ ಮತ್ತು ರಾವಣನಾಗಿ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಈ ಚಿತ್ರ ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡದಲ್ಲಿ ಜನವರಿ 12, 2023ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ.


Leave a Reply