This is the title of the web page

ಗೋವಾ ಜನರು ದೇಶದಲ್ಲೇ ಶ್ರೀಮಂತರು

 

ಹೊಸದಿಲ್ಲಿ, ೨೬- ಅಂತರ್ರಾಷ್ಟ್ರೀಯ ಖ್ಯಾತಿಯ ಪ್ರವಾಸಿ ತಾಣ ಗೋವಾ ರಾಜ್ಯದ ಪ್ರಜೆಗಳು ದೇಶದಲ್ಲೇ ಅತ್ಯಂತ ಶ್ರೀಮಂತರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇತ್ತೀಚಿಗೆ ಮಾನ್ಯತೆ ಪಡೆದ ಸಂಸ್ಥೆಯೊಂದು ನಡೆಸಿದ ಭಾರತದ ಆರ್ಥಿಕ ಸಮೀಕ್ಷೆಯಲ್ಲಿ ಭಾರತೀಯರ ವಾರ್ಷಿಕ ತಲಾ ಆದಾಯದಲ್ಲಿ ಗೋವಾ ಮುಂಚೂಣಿಯಲ್ಲಿದ್ದು – ಗೋವಾ ನಾಗರಿಕರ ತಲಾ ಆದಾಯ 4.91 ಲಕ್ಷ ( ₹ Rs 4,91,351.626) ಆಗಿದ್ದು ದೇಶದಲ್ಲೇ ಅತ್ಯಂತ ಶ್ರೀಮಂತರೆಂದು ಪರಿಗಣಿಸಿಸಲ್ಪಟ್ಟಿದ್ದಾರೆ. ಕೇಂದ್ರಾಡಳಿತ ದೆಹಲಿ ಎರಡನೆಯ ಹಾಗು ಸಿಕ್ಕಿಂ ಮೂರನೇ ಸ್ಥಾನದಲ್ಲಿವೆ.

ದೆಹಲಿಯ ಉಪಮುಖ್ಯಮಂತ್ರಿ ಮನೀಶ ಸಿಸೋಡಿಯಾ ಈ ಕುರಿತು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರ ರಾಜಧಾನಿ ದೆಹಲಿಯ ನಾಗರಿಕರ ತಲಾ ವಾರ್ಷಿಕ ಆದಾಯ ಕಳೆದ ಹಣಕಾಸು ವರ್ಷ 2021-22ರಲ್ಲಿ ಇತರ ಭಾರತೀಯರ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚಾಗಿತ್ತು. ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ. ದೆಹಲಿಯ ವಾರ್ಷಿಕ ತಲಾ ಆದಾಯ ₹ 4.02
ಲಕ್ಷ (₹ 4,01, 982). ದೆಹಲಿ ತಲಾ ಆದಾಯ 2016-17ರಲ್ಲಿ 6,16,085 ಇತ್ತು.

You might also like
Leave a comment