Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

National News

ನೋಟಿನಲ್ಲಿ ದೇವರ ಪೋಟೋ; ಕೇಜ್ರಿವಾಲ್‌ ವಿರುದ್ಧ ಆರ್‌ಬಿಐ ಕೆಂಡ

cm

ಹೊಸದಿಲ್ಲಿ : ನೋಟುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಬೇಕೆಂದು ಒತ್ತಾಯಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು ಈ ಬಗ್ಗ ಪ್ರತಿಕ್ರಿಯಿಸಿರುವ ಆರ್‌ಬಿಐ ಕೇಂದ್ರೀಯ ಮಂಡಳಿ ನಿರ್ದೇಶಕ ಎಸ್. ಗುರುಮೂರ್ತಿ ಅವರು, ಅರವಿಂದ ಕೇಜ್ರಿವಾಲ್‌ ಅವರು ಕೀಳ ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದಿದ್ದಾರೆ.

ಅಪಮೌಲ್ಯೀಕರಣವನ್ನು ತಡೆಯಲು ನೋಟುಗಳ ಮೇಲೆ ದೇವರುಗಳ ಚಿತ್ರಗಳನ್ನು ಹಾಕುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬೇಡಿಕೆ ಇಟ್ಟಿದ್ದಾರೆ. ಅವರ ಬೇಡಿಕೆಯು ಕೀಳು ಮಟ್ಟದ ರಾಜಕೀಯವಾಗಿದೆ. ಲಕ್ಷ್ಮಿ ದೇವಿಯ ಚಿತ್ರಗಳನ್ನು ಹಾಕುವುದರಿಂದ ಭಾರತೀಯರಿಗೆ ನೋಟುಗಳು ಹೆಚ್ಚು ಪವಿತ್ರವಾಗುವುದಿಲ್ಲ. ಗುಜರಾತ್ ವಿಧಾನಸಭಾ ಚುನಾವಣೆಗೆ ಮುನ್ನ ಕೇಜ್ರಿವಾಲ್‌ ಅವರು ಈ ಮೂರ್ಖ ಸಲಹೆ ನೀಡಿದ್ದಾರೆ ಎಂದೂ ಅವರು ಟೀಕಿಸಿದ್ದಾರೆ.

ಖಾಸಗಿ ಸುದ್ದಿವಾಹಿನಿಯೊಂದರ ಜೊತೆ ಮಾತನಾಡಿದ ಗುರುಮೂರ್ತಿ ಅವರು, ಕೇಜ್ರಿವಾಲ್ ಅವರು ತಮ್ಮ ರಾಜಕೀಯವನ್ನು ಅಪಾಯಕಾರಿಯಾಗಿ ಪರಿವರ್ತನೆ ಮಾಡುತ್ತಿದ್ದಾರೆ. ಇಂತಹ ಬೇಡಿಕೆ ಇಟ್ಟಾಗ ಯಾರೂ ಸಹ ಅದನ್ನು ವಿರೋಧಿಸಲು ಸಾಧ್ಯವಾಗುವುದಿಲ್ಲ. ಹುಸಿ ಸೆಕ್ಯುಲರ್‌ ರಾಜಕಾರಣಿಗಳನ್ನು ಅವರು ಮೀರಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಲಕ್ಷ್ಮಿ ದೇವಿಯನ್ನು ಪೂಜಿಸುವವರನ್ನು ನಾವು ಮುಜುಗರಕ್ಕೀಡು ಮಾಡಲು ಬಯಸುವುದಿಲ್ಲ. ಎಲ್ಲರ ಒಮ್ಮತವಿದ್ದರೆ ನೋಟುಗಳಲ್ಲಿ ಲಕ್ಷ್ಮಿ ಅಥವಾ ಗಣೇಶ ಚಿತ್ರಗಳನ್ನು ಮುದ್ರಿಸಬಹುದು. ಅದನ್ನು ನಾನು ವಿರೋಧಿಸಲಾರೆ. ಆದರೆ ಯಾರಾದರೂ ದೇವರನ್ನು ಅಪಹಾಸ್ಯ ಮಾಡಲು ಬಯಸಿದರೆ ಅಂತಹ ಕುಚೇಷ್ಟೆಯ ಭಾಗವಾಗಲು ನಾನು ಇಷ್ಟಪಡುವುದಿಲ್ಲ ಎಂದು ಹೇಳಿದ್ದಾರೆ.

ಭಾರತೀಯರು ಹಣವನ್ನು ಪವಿತ್ರವೆಂದೇ ನೋಡುತ್ತಾರೆ. ಅದರ ಮೇಲೆ ಲಕ್ಷ್ಮಿ ದೇವಿಯ ಚಿತ್ರಗಳನ್ನು ಹಾಕಲಿ ಅಥವಾ ಹಾಕದೇ ಇರಲಿ. ಚಿತ್ರ ಹಾಕುವುದರಿಂದ ಭಾರತೀಯರಿಗೆ ಕರೆನ್ಸಿ ಹೆಚ್ಚು ಪವಿತ್ರವಾಗುವುದಿಲ್ಲ ಎಂದು ಅವರು ಹೇಳಿದರು.

ರ್ಕಾರಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬರೆದಿರುವ ಪತ್ರದಲ್ಲಿ ಏನಿದೆ ಎಂಬುದನ್ನು ವಿವರಿಸಿದ್ದು ದೇಶದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರವೂ ಭಾರತವು ಅಭಿವೃದ್ಧಿ ಹೊಂದುತ್ತಿರುವ ಬಡ ದೇಶ ಎಂದು ಹೆಸರಾಗಿದೆ. ನಮ್ಮೆಲ್ಲರ ಪ್ರಯತ್ನಗಳಿಗೆ ದೇವತೆಗಳ ಆಶೀರ್ವಾದ ಬೇಕು. ಲಕ್ಷ್ಮಿ ದೇವತೆಯು ಸುಖ ಹಾಗೂ ಸಮೃದ್ಧಿಯ ಸಂಕೇತವಾಗಿದ್ದಾಳೆ. ಗಣೇಶನು ವಿಘ್ನಗಳನ್ನು ನಿವಾರಣೆ ಮಾಡುತ್ತಾನೆ. ಆ ಕಾರಣ, ಭಾರತದ ನೋಟುಗಳಲ್ಲಿ ಇಬ್ಬರ ಫೋಟೊಗಳನ್ನು ಮುದ್ರಿಸಬೇಕು. ಅದರೊಂದಿಗೆ ಮಹಾತ್ಮ ಗಾಂಧಿ ಅವರ ಫೋಟೋ ಇರಬೇಕು ಎಂದಿದ್ದಾರೆ. ಇದಕ್ಕೆ ಜನರ ಬೆಂಬಲವೂ ಇದೆ. ಈ ಬೇಡಿಕೆಯನ್ನು ಈಡೇರಿಸಬೇಕೆಂದು ಪ್ರತಿಯೊಬ್ಬ ಭಾರತೀಯ ಬಯಸುತ್ತಿದ್ದಾನೆ ಎಂದೂ ಕೇಜ್ರಿವಾಲ್‌ ಹೇಳಿದ್ದಾರೆ.

ಎಲ್ಲಾ ನೋಟುಗಳನ್ನು ಬದಲಿಸಿ ಎಂದು ನಾನು ಹೇಳುವುದಿಲ್ಲ. ಬಿಡುಗಡೆ ಆಗುವ ಕೆಲ ನೋಟುಗಳ ಮೇಲೆ ದೇವತೆಗಳ ಫೋಟೋಗಳು ಇರಬೇಕು ಎಂಬುದು ನನ್ನ ಬೇಡಿಕೆ ಆಗಿದೆ ಎಂದು ಅವರು ಹೇಳಿದ್ದಾರೆ.

ಕೇಜ್ರಿವಾಲ್ ಬೇಡಿಕೆಯು ರಾಜಕೀಯ ಪ್ರೇರಿತವಾದದ್ದು ಎಂದು ಬಿಜೆಪಿ ಹರಿಹಾಯ್ದಿದೆ. ಈ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಬಿಜೆಪಿ ನಾಯಕ ಸಂದೀಪ ಪಾತ್ರ, ಹಿಂದೂ ಧರ್ಮದ ವಿಚಾರದಲ್ಲಿ ಕೇಜ್ರಿವಾಲ್‌ ದ್ವಂದ್ವ ನಿಲುವನ್ನು ಹೊಂದಿದ್ದಾರೆ. ಅವರು ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರನ್ನು ವ್ಯಂಗ್ಯ ಮಾಡಿದವರು. ರಾಮನ ದೇವಾಲಯಕ್ಕೆ ಹೋಗಲು ನಿರಾಕರಿಸಿದವರು. ಆದರೆ, ಈಗ ಮಾತ್ರ ಹಿಂದುತ್ವದ ಮುಖವಾಡ ಧರಿಸಿ ಗುಜರಾತ್‌ ಚುನಾವಣೆಗೆ ತಂತ್ರ ರೂಪಿಸಿದ್ದಾರೆ ಎಂದು ತಿಳಿಸಿದ್ದಾರೆ


A B Dharwadkar
the authorA B Dharwadkar

Leave a Reply