This is the title of the web page

ಉಕ್ರೇನ್ ನಲ್ಲಿ ಸಿಕ್ಕಿಕೊಂಡಿರುವ ಗೋಕಾಕ, ರಾಯಬಾಗ, ವಿಜಯಪುರ ವಿದ್ಯಾರ್ಥಿಗಳು

ಬೆಳಗಾವಿ, 24- ರಶಿಯಾದೊಂದಿಗೆ ಭಾರಿ ಯುದ್ಧ ನಡೆದಿರುವ ಉಕ್ರೇನ್ ದೇಶದಲ್ಲಿ ಬೆಳಗಾವಿ ಜಿಲ್ಲೆಯ ಇಬ್ಬರು ಹಾಗೂ ವಿಜಯಪುರ ಜಿಲ್ಲೆಯ ಒಬ್ಬರು ಇದ್ದಾರೆಂದು ಜಿಲ್ಲಾ ಪಾಲಕ ಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಅಮೋಘ ಚೌಗಲಾ, ರಾಯಬಾಗ ತಾಲೂಕಿನ ಪ್ರಿಯಾ ನಿಡಗುಂದಿ ಹಾಗು ವಿಜಯಪುರ ಜಿಲ್ಲೆಯ ಒಬ್ಬರು ವಿದ್ಯಾಭ್ಯಾಸಕ್ಕಾಗಿ ಉಕ್ರೇನ್ ನಲ್ಲಿದ್ದು, ಅವರನ್ನು ಮರಳಿ ದೇಶಕ್ಕೆ ತರುವ ಪ್ರಯತ್ನ ನಡೆದಿದೆ. ಅವರ ಕುಟುಂಬಸ್ಥರ ಮೂಲಕ ಅವರನ್ನು ಸಂಪರ್ಕಿಸಲಾಗಿದ್ದು ಅವರು ಸುರಕ್ಷಿತರಾಗಿದ್ದಾರೆ ಎಂದರು.

ಉಕ್ರೇನ್ ನಲ್ಲಿ 20 ಸಾವಿರ ಭಾರತೀಯ ವಿದ್ಯಾರ್ಥಿಗಳು ನೆಲೆಸಿದ್ದಾರೆ.

You might also like
Leave a comment