This is the title of the web page

ಇಲಿಗಳ ಬಾಯಲ್ಲಿತ್ತು ೧೦ ತೊಲಿ ಚಿನ್ನಾಭರಣ : ಅಚ್ಚರಿಯಾದ್ರು ಸತ್ಯ 

ಮುಂಬೈ, ೧೬- ಇಲ್ಲಿನ ಗೋಕುಲಧಾಮ್ ಕಾಲೋನಿ ಬಳಿಯ ಚರಂಡಿಯಲ್ಲಿದ್ದ ಇಲಿಗಳಿಂದ 5 ಲಕ್ಷ ರೂಪಾಯಿ ಮೌಲ್ಯದ 10 ತೊಲಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಬ್ ಇನಸ್ಪೆಕ್ಟರ್ ಜಿ ಘಾರ್ಗೆ ತಿಳಿಸಿದ್ದಾರೆ.

ಕೆಲವು ಇಲಿಗಳು ಕಸದ ರಾಶಿಯಲ್ಲಿದ್ದ ಚಿನ್ನದ ಚೀಲವನ್ನು ಚರಂಡಿಗೆ ತೆಗೆದುಕೊಂಡು ಹೋಗುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ಮೂಲಕ ಪರಿಶೀಲಿಸಿದ ನಂತರ ಪೊಲೀಸರು ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ ಎಂದು ಸಬ್ ಇನಸ್ಪೆಕ್ಟರ್ ತಿಳಿಸಿದ್ದಾರೆ.

ಸಬ್ ಇನ್ಸ್‌ಪೆಕ್ಟರ್ ಪ್ರಕಾರ, ಮಹಿಳೆಯೊಬ್ಬರು ತಮ್ಮ ಚಿನ್ನಾಭರಣವನ್ನು ಬ್ಯಾಂಕ್‌ಗೆ ಠೇವಣಿ ಇಡಲು ಹೋಗುತ್ತಿದ್ದಾಗ ಅದನ್ನು ವಡಾ ಪಾವ್ ಎಂದು ಗ್ರಹಿಸಿ ವಡಾ ಪಾವ್ ಜೊತೆಗೆ ತನ್ನ ಬಳಿ ಇದ್ದ ಬಂಗಾರ ಸಹ ಬೀದಿಯಲ್ಲಿ ಮಕ್ಕಳಿಗೆ ನೀಡಿದ್ದರು.

ಬಳಿಕ ವಡಾ ಪಾವ್ ತಿಂದ ಮಕ್ಕಳು ಆಭರಣದ ಚೀಲವನ್ನು ಕಸದ ರಾಶಿಯಲ್ಲಿ ಎಸೆದಿದ್ದರು. ಇತ್ತ ತನ್ನ ಬ್ಯಾಗ್ ಕಳೆದು ಹೋಗಿರುವುದನ್ನು ಅರಿತ ಮಹಿಳೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಆ ಭಾಗದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಇಲಿಗಳು ಎತ್ತುಕೊಂಡಿರುವುದು ತಿಳಿದುಬಂತು.

 

You might also like
Leave a comment