This is the title of the web page

ಪರೀಕ್ಷೆ ಪಾಸಾಗಿ 24 ವರ್ಷದ ಬಳಿಕ ಸಿಕ್ಕಿತು ಸರಕಾರಿ ನೌಕರಿ; ಹುಚ್ಚನಂತಿದ್ದವ ಆದ ಜಂಟಲಮನ್ 

 

ಅಮರಾವತಿ : ಪರೀಕ್ಷೆ ಬರೆದು 24 ವರ್ಷಗಳ ಬಳಿಕ ವ್ಯಕ್ತಿಯೊಬ್ಬರಿಗೆ ನೌಕರಿ ಸಿಕ್ಕಿದೆ. ಶಿಕ್ಷಕನಾಗಬೇಕೆಂದು ಕನಸು ಕಂಡು ತಮ್ಮ 33ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು ಪಾಸ್ ಕೂಡ ಆಗಿದ್ದರು, ಆದರೆ ಅವರ ನೇಮಕಾತಿಗೆ ಕಾನೂನು ತೊಡಕಾಗಿ ನೌಕರಿ ದೊರೆಯಲಿಲ್ಲ. ಆದರೆ 57 ವರ್ಷದ ಅವರಿಗೆ ಈಗ 24 ವರ್ಷಗಳ ಬಳಿಕ ಸರಕಾರಿ ಶಾಲೆಗೆ ಶಿಕ್ಷಕರೆಂದು ನೇಮಕಾತಿ ಪತ್ರ ಬಂದಿದೆ.

ಆಂಧ್ರಪ್ರದೇಶ ಪಥಪಟ್ಟಣದ ಪೆದ್ದಾ ಸಿದ್ದಿಯ ಅಲಕಾ ಕೇದಾರೇಶ್ವರ ರಾವ್ ತಮ್ಮ ಬ್ಯಾಚುಲರ್ ಆಫ್ ಎಜ್ಯುಕೇಷನ್ ಡಿಗ್ರಿ ಮುಗಿಸಿ, 1998ರಲ್ಲಿ ಸರ್ಕಾರಿ ಶಾಲೆಯ ಶಿಕ್ಷಕರಾಗುವ ಸಲುವಾಗಿ ಡಿಎಸ್‌ಸಿ ಎಂಬ ಅರ್ಹತಾ ಪರೀಕ್ಷೆ ಬರೆದಿದ್ದರು. ಆದರೆ ಕಾನೂನು ಸಮಸ್ಯೆಯಿಂದ ಅವರ ಆಯ್ಕೆ ಆಗಿರಲಿಲ್ಲ. ಇತ್ತೀಚೆಗೆ ಜಿಲ್ಲಾ ಆಯ್ಕೆ ಸಮಿತಿ ಕಡತ ತೆರವು ಯೋಜನೆಯಲ್ಲಿ 1998ರಿಂದ ಬಾಕಿ ಉಳಿದಿದ್ದ ಕೇದಾರೇಶ್ವರ ರಾವ್ ಅವರ ಫೈಲ್ ಪರಿಶೀಲಿಸಿ ಅವರಿಗೆ ಜಿಲ್ಲೆಯ ತೆಲಗು ಮಾಧ್ಯಮಿಕ ಶಾಲೆಯೊಂದಕ್ಕೆ ಶಿಕ್ಷಕರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿದೆ.

ಕೇದಾರೇಶ್ವರ‌ ರಾವ್ ಗೆ ತಮ್ಮ 57ನೇ ವಯಸ್ಸಿನಲ್ಲಿ ತಮ್ಮ ಅಭಿಲಾಷೆಯ ಸರಕಾರಿ ಶಾಲಾ ಶಿಕ್ಷಕ ಹುದ್ದೆ ಪಡೆದಿದ್ದಾರೆ. ಕೈಯಲ್ಲಿ ಹಣವಿಲ್ಲದೆ ಸಣ್ಣ ಪುಟ್ಟ ಕೆಲಸ ಮಾಡಿಕೊಂಡು ತಾಯಿಯೊಂದಿಗೆ ಜೀವನ ಸಾಗಿಸುತ್ತಿದ್ದರು. ತಾಯಿಯ ಮರಣದ ಬಳಿಕ ಖಿನ್ನತೆಗೆ ಜಾರಿದ ಅವರು ಭಿಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಯಿತು. ಅವರನ್ನು ಸ್ಥಳೀಯರು ಮಾನಸಿಕ ಅಸ್ವಸ್ಥ ಎಂದು ದೂರವಿಡಲು ಪ್ರಾರಂಭಿಸಿದರು.

ನೇಮಕಾತಿಯ ಆದೇಶ ತಲುಪುತ್ತಿದಂತೆ ಕೇದಾರೇಶ್ವರ್ ಅವರ ಜೀವನ ಶೈಲಿ ಮಾತ್ರವಲ್ಲ ಅವರನ್ನು ಮಾನಸಿಕ ಅಸ್ವಸ್ಥರೆಂದು ಜರಿದವರ ನಡವಳಿಕೆ ಬದಲಾಗಿದೆ.

 

You might also like
Leave a comment