This is the title of the web page

ದೇಹ ಬೇರ್ಪಡಿಸಲಾಗದ ಅವಳಿಗಳಿಗೆ ಸರಕಾರಿ ನೌಕರಿ

 

ಹೊಸದಿಲ್ಲಿ, 24-: ಅಮೃತಸರದ ಸಂಯೋಜಿತ ಅವಳಿಗಳಾದ ಸೋಹ್ನಾ ಸಿಂಗ್‌ ಮತ್ತು ಮೋಹ್ನಾ ಸಿಂಗ್‌ ಅವರು ಪಂಜಾಬ್ ಸ್ಟೇಟ್ ಪಾವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಪಿಎಸ್‌ಪಿಸಿಎಲ್) ನೌಕರಿ ಪಡೆದಿದ್ದಾರೆ.

19 ವರುಷದ ಸೋಹ್ನಾ ಅವರು ಡಿಸೆಂಬರ್ 20 ರಂದು ಕೆಲಸಕ್ಕೆ ಸೇರಿದ್ದು ಅವರು ಮೋಹ್ನಾ ಜೊತೆಗೆ ಪಿಎಸ್‌ಪಿಸಿಎಲ್ (PSPCL) ನಲ್ಲಿ ವಿದ್ಯುತ್ ಉಪಕರಣಗಳನ್ನು ನೋಡಿಕೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಲ್ಲಿನ ವಿದ್ಯುತ್ ಉಪಕರಣಗಳನ್ನು ನೋಡಿಕೊಳ್ಳಲು ಸೋಹ್ನಾ ಮತ್ತು ಮೋಹ್ನಾ ನಮಗೆ ಸಹಾಯ ಮಾಡುತ್ತಾರೆ. ಸೋಹ್ನಾಗೆ ಕೆಲಸ ಸಿಕ್ಕಿತು ಮತ್ತು ಮೋಹ್ನಾ ಅವರಿಗೆ ಸಹಾಯ ಮಾಡುತ್ತಾರೆ” ಎಂದು ಪಿಎಸ್‌ಪಿಸಿಎಲ್‌ನ ಸಬ್‌ಸ್ಟೇಷನ್ ಜೂನಿಯರ್ ಎಂಜಿನೀಯರ ರವೀಂದರ ಕುಮಾರ ತಿಳಿಸಿದ್ದಾರೆ.

ಕ್ಷೇತ್ರದಲ್ಲಿ ಮೊದಲಿನ ಅನುಭವವಿದ್ದ ಕಾರಣ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಈ ಅವಕಾಶವನ್ನು ಒದಗಿಸಿದ್ದಕ್ಕಾಗಿ ಈ ಸಂಯೋಜಿತ ಅವಳಿಗಳು ಪಂಜಾಬ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ. “ನಾವು ಕೆಲಸದ ಬಗ್ಗೆ ತುಂಬಾ ಸಂತೋಷಪಟ್ಟಿದ್ದೇವೆ ಮತ್ತು ಡಿಸೆಂಬರ್ 20 ರಂದು ಕೆಲಸಕ್ಕೆ ಸೇರಿದ್ದೇವೆ. ಅವಕಾಶಕ್ಕಾಗಿ ಪಂಜಾಬ್ ಸರ್ಕಾರ ಮತ್ತು ನಮಗೆ ಶಿಕ್ಷಣ ನೀಡಿದ ಪಿಂಗಲ್ವಾರಾ ಸಂಸ್ಥೆಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ” ಎಂದು ತಿಳಿಸಿದ್ದಾರೆ.

ಈ ಸಂಯೋಜಿತ ಅವಳಿಗಳು ಜೂನ್ 14, 2003 ರಂದು ನವದೆಹಲಿಯಲ್ಲಿ ಜನಿಸಿದರು. ಈ ಸಂಯೋಜಿತ ಅವಳಿಗಳಿಗೆ ಸೊಂಟದ ಕೆಳಗಿನ ಭಾಗ ಒಂದೇ ಆಗಿದೆ. ಎರಡು ಹೃದಯಗಳು, ತೋಳುಗಳು, ಮೂತ್ರಪಿಂಡಗಳು ಮತ್ತು ಬೆನ್ನುಹುರಿಗಳೊಂದಿಗೆ ಜನಿಸಿದರು. ಆದರೆ ಯಕೃತ್ತು, ಮೂತ್ರಕೋಶ ಮತ್ತು ಕಾಲುಗಳನ್ನು ಇಬ್ಬರೂ ಹಂಚಿಕೊಂಡಿದ್ದಾರೆ. ಅಂದರೆ ಇಬ್ಬರಿಗೂ ಒಂದೇ ಆಗಿದೆ.

ಜನನದ ನಂತರ, ಸೋಹ್ನಾ ಮತ್ತು ಮೋಹ್ನಾ ಅವರನ್ನು ಅವರ ಪೋಷಕರು ಕೈಬಿಟ್ಟಿದ್ದು, ಅವರನ್ನು ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ ಕರೆದೊಯ್ಯಲಾಯಿತು. ಶಸ್ತ್ರಚಿಕಿತ್ಸೆಯು ಮಾರಣಾಂತಿಕ ತೊಡಕುಗಳನ್ನು ಉಂಟುಮಾಡಬಹುದು ಎಂದು ಏಮ್ಸ್‌ ವೈದ್ಯರು ಅವರನ್ನು ಬೇರ್ಪಡಿಸುವುದು ಬೇಡವೆಂಬ ನಿರ್ಧಾರಕ್ಕೆ ಬಂದರು.

You might also like
Leave a comment