This is the title of the web page

ಹಲಸಿ ನಾಡವಿರೋಧಿ ಘಟನೆ; 3 ಬಂಧನ

ಬೆಳಗಾವಿ, ೨೧- ಅಹಿಂಸೆಯ ಹರಿಕಾರ, ಮಹಾಮಾನವತಾವಾದಿ ಬಸವೇಶ್ವರ ಭಾವಚಿತ್ರಕ್ಕೆ ಸೆಗಣಿ ಎರಚಿ ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಗಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ನಡೆದ ಈ ಘಟನೆಯ ಸಂಬಂಧ ಅದೇ ಗ್ರಾಮದವರೇ ಆದ ಸಚಿನ ಓಮಣ್ಣ ಗುರವ, ಸಂಜು ಓಮಣ್ಣ ಗುರವ ಮತ್ತು ಗಣೇಶ ಕೃಷ್ಣಾಜಿ ಪೆಡ್ನೇಕರ ಬಂಧಿತರು.

ಗ್ರಾಮದ ಬಸವೇಶ್ವರ ವೃತ್ತದ ಬಸವೇಶ್ವರ ಭಾವಚಿತ್ರಕ್ಕೆ ರವಿವಾರ ರಾತ್ರಿ ಸೆಗಣಿ ನೀರು ಎರಚಿದ ದುಷ್ಕರ್ಮಿಗಳು ವೃತ್ತದಲ್ಲಿ ಅಳವಡಿಸಿದ್ದ ಬಸವೇಶ್ವರ ವೃತ್ತ ಕನ್ನಡ ನಾಮಫಲಕಕ್ಕೂ ಮಸಿ ಬಳಿದಿದ್ದರು. ಅಲ್ಲದೇ ಗ್ರಾಮ ಪಂಚಾಯತಿ ಆವರಣದಲ್ಲಿದ್ದ ಕನ್ನಡ ಬಾವುಟವನ್ನು ಕಿತ್ತು ಹಾಕಿದ್ದರು.

ಬೆಳಗಾವಿಯಲ್ಲಿ ವಿಧಾನ ಮಂಡಳದ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ನಡೆದ ಈ ಘಟನೆ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅಧಿವೇಶನದಲ್ಲೂ ವಿಷಯ ಪ್ರಸ್ತಾಪವಾಗಿತ್ತು.

You might also like
Leave a comment