Live Stream

November 2022
W T F S S M T
 1
2345678
9101112131415
16171819202122
23242526272829
30  

| Latest Version 8.2.9 |

State News

ವೆಬ್ ಸೈಟ್ ನಲ್ಲಿ ಎಫ್‌ಐಆರ್ ಪ್ರಕಟಿಸದ ರಾಜ್ಯ ಸರ್ಕಾರಕ್ಕೆ ಹೈಕೋರ್ಟ ನೋಟಿಸ್ 

highcourt

ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾದ ಬಳಿಕ, ಎಫ್‌ಐಆರ್ ಪ್ರತಿಯನ್ನು ವೆಬಸೈಟ್ ನಲ್ಲಿ ಪ್ರಕಟಿಸುವುದಕ್ಕೆ ತಡ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ ನೋಟಿಸ್ ಜಾರಿಗೊಳಿಸಿದೆ.

ವಕೀಲ ಉಮಾಪತಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಕಿಣಿಗಿ ನೇತೃತ್ವದ ಕರ್ನಾಟಕ ವಿಭಾಗೀಯ ಪೀಠವು ಕರ್ನಾಟಕ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಿಪಿಎಆರ್ ಮತ್ತು ಎಡಿಜಿಪಿ ಲೋಮಾಯುಕ್ತ ಅವರಿಗೆ ನೋಟಿಸ್ ಜಾರಿ ಮಾಡಿದೆ.

ನೋಂದಣಿಯಾದ 24 ಗಂಟೆಗಳ ಒಳಗೆ ತನ್ನ ವೆಬಸೈಟನಲ್ಲಿ ಎಫ್‌ಐಆರ್ ಅನ್ನು ಲೋಡ್ ಮಾಡದಿರುವ ಬಗ್ಗೆ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಎಡಿಜಿಪಿ ಲೋಕಾಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ. ಈ ಬಳಿಕ ಪ್ರಕರಣವನ್ನು ನವೆಂಬರ 9 ಕ್ಕೆ ಮುಂದೂಡುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿದೆ.


A B Dharwadkar
the authorA B Dharwadkar

Leave a Reply