This is the title of the web page

ಬೆಳಗಾವಿಯಲ್ಲಿ ಭಾರಿ ಮಳೆ, ಬಿರುಗಾಳಿಗೆ ಧರೆಗುರುಳಿದ ಮರಗಳು; ಓರ್ವ ಬಲಿ, 35 ದ್ವಿಚಕ್ರ ವಾಹನಗಳಿಗೆ ಹಾನಿ

ಬೆಳಗಾವಿ, ೧೯-ಮಂಗಳವಾರ ಮಧ್ಯಾಹ್ನ ಮತ್ತು ಸಂಜೆ ಸುರಿದ ಗುಡುಗು, ಮಿಂಚು, ಸಿಡಿಲು, ಬಿರುಗಾಳಿಯಿಂದ ಕೂಡಿದ ಮಳೆ ಬೆಳಗಾವಿ ನಗರದಲ್ಲಿ ವ್ಯಾಪಕ ಹಾನಿ ಮಾಡಿದ್ದಲ್ಲದೇ ಜನಜೀವನ ಅಸ್ತವ್ಯಸ್ತವಾಗಿತ್ತು.

ಭಾರಿ ಮಳೆ, ಬಿರುಗಾಳಿಯ ನಡುವೆ ಕ್ಲಬ್ ರಸ್ತೆಯ ಹರ್ಷ ಷೋರೂಮ್ ಎದುರಿನ ರಸ್ತೆಯಲ್ಲಿ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಮರವೊಂದು ಬಿದ್ದು ಅವರು ಸ್ಥಳದಲ್ಲೇ ಅಸುನೀಗಿದ್ದಾರೆ.

ಕೊಲ್ಹಾಪುರ ವೃತ್ತದಿಂದ ರಾಣಿ ಚನ್ನಮ್ಮ ವೃತ್ತಕ್ಕೆ ತೆರಳುವ ಮಾರ್ಗದಲ್ಲಿ ಸಿವಿಲ್ ಆಸ್ಪತ್ರೆ ರಸ್ತೆಯಲ್ಲಿರುವ ಹೀರೋ ಹೊಂಡಾ ಬೈಕ್ ಷೋ ರೂಮ್ ಎದುರು ರಸ್ತೆ ಬದಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಮೇಲೆ ಬೃಹತ್ ಮರವೊಂದು ಬಿದ್ದು ಸುಮಾರು 30 ವಾಹನಗಳು ಹಾನಿಗೊಂಡಿವೆ.

ಬಿರುಗಾಳಿಯ ರಭಸಕ್ಕೆ ತಗಡುಗಳು, ರಸ್ತೆಯಲ್ಲಿದ್ದ ನಾಮಫಲಕಗಳು ಹಾರಿ ಹೋದವು. ನಗರದಾದ್ಯಂತ ಅನೇಕ ಮರಗಳು ಉರುಳಿದ್ದು ಬಿದ್ದಿರುವ ಮರಗಳ ತೆರವಿಗೆ ಮಹಾನಗರ ಪಾಲಿಕೆ ಹಾಗೂ ವಿದ್ಯುತ್ ಇಲಾಖೆ ಕ್ರಮ ಕೈಕೊಂಡಿತ್ತು. ವಿದ್ಯುತ್ ಸಂಪರ್ಕ ಸಹ ಕಡಿತಗೊಂಡಿತ್ತು.

You might also like
Leave a comment