This is the title of the web page

ಹಿಜಾಬ್ ಅನುಮತಿ ಕೋರಿ ಕೋರ್ಟ ಮೆಟ್ಟಿಲೇರಿದ ಯುವತಿಯ ಕುಟುಂಬದ ಮೇಲೆ ಹಲ್ಲೆ

ಉಡುಪಿ, 22- ಹಿಜಾಬ್ ಅನುಮತಿ ಕೋರಿ ಹೈಕೋರ್ಟ ಮೆಟ್ಟಿಲೇರಿದ ವಿದ್ಯಾರ್ಥಿನಿಯ ತಂದೆಯ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿದ ಘಟನೆ ಮಲ್ಪೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿದೆ.

ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದಿದ್ದಕ್ಕಾಗಿ ಹೈಕೋರ್ಟ ಮೆಟ್ಟಿಲೇರಿದ್ದ ಕಾಲೇಜು ವಿದ್ಯಾರ್ಥಿನಿಯರಲ್ಲಿ ಒಬ್ಬರಾದ ಶಿಫಾ ಅವರ ತಂದೆ ಹೈದರ್ ಅಲಿ ಅವರಿಗೆ ಸೇರಿದ ‘ಬಿಸ್ಮಿಲ್ಲಾ ಹೋಟೆಲ್’ ಮೇಲೆ ಸೋಮವಾರ ರಾತ್ರಿ 9.30ರ ವೇಳೆಗೆ 50 ಕ್ಕೂ ಹೆಚ್ಚು ಜನರಿದ್ದ ಗುಂಪು ಕಲ್ಲು ತೂರಾಟ ನಡೆಸಿದೆ.

ಅಲ್ಲದೇ ಹೊಟೇಲ್‍ನಲ್ಲಿದ್ದ ಆಕೆಯ ಸಹೋದರ ಸೈಫ್(20) ಅವರ ಮೇಲೂ ಹಲ್ಲೆ ನಡೆಸಿದ್ದು ಘಟನೆಯಲ್ಲಿ ಹೋಟೆಲಿನ ಗಾಜುಗಳು ಪುಡಿಯಾಗಿವೆ ಎಂದು ಆರೋಪಿಸಲಾಗಿದೆ.

ಸೈಫ್‍ನನ್ನು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಈ ಬಗ್ಗೆ ಹಿಜಾಬ್ ದೂರು ನೀಡಿರುವ ಹಜ್ರಾ ಶಿಫಾ ಟ್ವೀಟ್ ಮಾಡಿದ್ದಾರೆ. “ಹಿಜಾಬ್‌ ಹೋರಾಟ ಮುಂದುವರಿಸಿದ್ದಕ್ಕಾಗಿ ನನ್ನ ಅಣ್ಣನ ಮೇಲೆ ಹಾಗೂ ನಮ್ಮ ತಂದೆಯ ಮೇಲೆ ದಾಳಿಯಾಗಿದೆ. ನಮ್ಮ ಹಕ್ಕುಗಳಿಗಾಗಿ ಹೋರಾಡುವುದು ತಪ್ಪೇ” ಎಂದು ಪ್ರಶ್ನಿಸಿದ್ದಾಳೆ. ಸಂಘ ಪರಿವಾರದ ಯುವಕರು ಹಲ್ಲೆ ನಡೆಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.

You might also like
Leave a comment