This is the title of the web page

ವಿಜಯಪುರದಲ್ಲೂ ಶುರುವಾಯ್ತು ಹಿಜಾಬ್ ವಿವಾದ; ಕಾಲೇಜುಗಳಿಗೆ ರಜೆ

ಇಂಡಿ, 7- ಕರಾವಳಿ ಜಿಲ್ಲೆಗಳಿಗೆ ಮೀಸಲಾಗಿದ್ದ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಈಗ ವಿಜಾಪುರ ಜಿಲ್ಲೆಗೂ ವ್ಯಾಪಿಸಿದ್ದು ಹಿಜಾಬ್ ಗೆ ಪ್ರತಿಯಾಗಿ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರಿಂದ ಎರಡು ಕಾಲೇಜ್ ಗಳಿಗೆ ರಜೆ ಘೋಷಿಸಲಾಗಿದೆ.

ವಿಜಯಪುರ ‌ಜಿಲ್ಲೆ ಇಂಡಿ ಪಟ್ಟಣದ ಶಾಂತೇಶ್ವರ ‌ಪಿಯುಸಿ ಕಾಲೇಜು‌ ಹಾಗೂ ಗು.ರಾ. ಗಾಂಧಿ‌ ಕಲಾ, ವಾಯ್. ಎ. ಪಾಟೀಲ ವಾಣಿಜ್ಯ ಹಾಗೂ ಮಾ ಫು‌ ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಧರಿಸಿ ಆಗಮಿಸಿ ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ.

ಶಾಂತೇಶ್ವರ ‌ಪಿಯುಸಿ ಕಾಲೇಜು‌ ಹಾಗೂ ಜಿ ಆರ್ ಬಿ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಆಗಮಿಸಿದ್ದರ ಹಿನ್ನೆಲೆಯಲ್ಲಿ ಎರಡೂ ಕಾಲೇಜುಗಳಿಗೆ ಆಡಳಿತ ಮಂಡಳಿ ತುರ್ತು ಸಭೆ ನಡೆಸಿ ರಜೆ ಘೋಷಿಸಿದವು.

ಇಂದು‌ ಒಂದು ದಿನದ ಮಟ್ಟಿಗೆ ರಜೆ ಘೋಷಣೆ ಮಾಡಿದ್ದು ನಾಳೆಯಿಂದ ಸರ್ಕಾರ ಜಾರಿ ಮಾಡಿರುವ ಪ್ರಕಾರ ಯುನಿಫಾರ್ಮ ಹಾಕಿಕೊಂಡು‌ ಬರುವಂತೆ ಸೂಚಿಸಿದ್ದಾರೆ.

ಕೇಸರಿ ಶಾಲು ಧರಿಸಿ ಆಗಮಿಸಿದ ವಿದ್ಯಾರ್ಥಿಗಳು ಮಾಧ್ಯಮಗಳ ಜೊತೆ ಮಾತನಾಡಿ, ಹಿಜಾಬ್ ಧರಿಸದೇ ವಿದ್ಯಾರ್ಥಿನಿಯರು ತರಗತಿಗೆ ಬಂದರೆ ಮಾತ್ರ ನಾವು ಕೇಸರಿ ಶಾಲು ತೆಗೆಯುತ್ತೇವೆ. ಆದರೆ ಹಿಜಾಬ್ ಧರಿಸಿ ಕಾಲೇಜ್ ಬಂದರೆ ಕೇಸರಿಯನ್ನು ಧರಿಸಿಯೇ ತರಗತಿಗೆ ಹೋಗುತ್ತೇವೆ ಎಂದು ಹೇಳಿದ್ದಾರೆ.

ನಾಳೆ ಹೈಕೋರ್ಟ್ ಹಿಜಾಬ್ ಪ್ರಕರಣದ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲಿದೆ.

You might also like
Leave a comment