This is the title of the web page

ಬೆಳಗಾವಿಯ ಕೆಲ ಕಾಲೇಜುಗಳಲ್ಲಿ ಹಿಜಾಬ್ ಜಟಾಪಟಿ

ಬೆಳಗಾವಿ, 16- ಹಿಜಾಬ್-ಕೇಸರಿ ಶಾಲು ವಿವಾದದ ಮಧ್ಯೆ ರಾಜ್ಯದಲ್ಲಿ ಇಂದಿನಿಂದ ಕಾಲೇಜುಗಳು ಪುನಃ ಪ್ರಾರಂಭವಾಗಿವೆ.

ಕೇಸರಿ ಶಾಲು ಎಲ್ಲಿಯೂ ಕಂಡು ಬಂದಿಲ್ಲ, ಆದರೆ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರು ಕಾಲೇಜಿನ ಕೊಠಡಿಯೊಂದರಲ್ಲಿ ತೆಗೆದು ತರಗತಿಗಳಿಗೆ ತೆರಳಿದರು.

ಕಾಲೇಜ ಗೇಟ್ ಬಳಿ ಕಾಲೇಜ ಸಿಬ್ಬಂದಿ ನಿಂತು ವಿದ್ಯಾರ್ಥಿನಿಯರಿಗೆ ಈ ಕುರಿತು ಮಾಹಿತಿ ಕೊಡುತ್ತಿದ್ದರು.

ಪ್ರತಿಯೊಂದು ಕಾಲೇಜಿನ ಮುಂದೆ ನಾಲ್ಕು  ಪೊಲೀಸರ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದಾರೆ.

ಬೆಳಗಾವಿ ಲಿಂಗರಾಜ ಕಾಲೇಜಿನ ಕೆಲ ವಿದ್ಯಾರ್ಥಿಗಳು ಹಿಜಾಬ್‍ ತೆಗೆಯಲು ನಿರಾಕರಿಸಿದರಾದರೂ ಕಾಲೇಜನಲ್ಲಿ ಹಿಜಾಬ್ ತೆಗೆದಿರಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿರುವದನ್ನು ತಿಳಿಸಿದಾಗ ಒಪ್ಪಿಕೊಂಡು ಪ್ರತ್ಯೇಕ ಕೊಠಡಿಯಲ್ಲಿ ಹಿಜಾಬ್ ತೆಗೆದು ತರಗತಿ ಪ್ರವೇಶ ಮಾಡಿದ್ದಾರೆ.

ಇನ್ನು ಕೆಲವೆಡೆ ಕೆಲ ವಿದ್ಯಾರ್ಥಿಗಳು ಹಿಜಾಬ್ ತೆರೆಯುವ ವಿಚಾರವಾಗಿ ಕಾಲೇಜು ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ ಕಾಲೇಜು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು ಗೊಂದಲದ ವಾತಾವರಣ ಸೃಷ್ಟಿಯಾಯಿತು. ಈ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ನಮ್ಮ ಹಿಜಾಬ್ ನಮ್ಮ ಹಕ್ಕು. ಇದನ್ನು ನಮ್ಮಿಂದ ಯಾರೂ ಕೂಡ ಕಸಿದುಕೊಳ್ಳಲಾಗುವುದಿಲ್ಲ. ನಾವು ಇದನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಕ್ಯಾಂಪ್ ಪೊಲೀಸ್ ಠಾಣಾ ಸಿಪಿಐ ಪ್ರಭಾಕರ ಧರಮಟ್ಟಿ ಅವರು ವಿದ್ಯಾರ್ಥಿಗಳನ್ನು ಶಾಂತಗೊಳಿಸಿದರು. ವಿದ್ಯಾರ್ಥಿಗಳ ಮನವೊಲಿಸಿ ಪಾಲಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನ್ಯಾಯಾಲಯದ ಆದೇಶ ಪಾಲಿಸುವಂತೆ ಮನವಿ ಮಾಡಿದರು. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ.

You might also like
Leave a comment