This is the title of the web page

100ನೇ ವರ್ಷಕ್ಕೆ ಕಾಲಿಟ್ಟ ಹೀರಾಬೆನಜೀ : ತಾಯಿಯ ಆಶೀರ್ವಾದ ಪಡೆದುಕೊಂಡ ಪ್ರಧಾನಿ

ಗಾಂಧಿನಗರ, ೧೮- : ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್ ಮೋದಿ ಅವರ ಜನ್ಮದಿನದಂದು ಗಾಂಧಿನಗರದಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ.

ಹೀರಾಬೆನ್ ಮೋದಿ ಅವರು ಇಂದು 100 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಗಾಂಧಿನಗರದಲ್ಲಿರುವ ತಾಯಿ ಹೀರಾಬೆನ್ ಮೋದಿ ಅವರ ನಿವಾಸಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಡ್ನಗರ್‌ನ ಹಟಕೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಈ ವಯಸ್ಸಿನಲ್ಲೂ ಹೀರಾಬೆನ್ ಮೋದಿ ಆರೋಗ್ಯವಾಗಿದ್ದಾರೆ. ಅವರು ತಮ್ಮ ಕಿರಿಯ ಮಗ ಪಂಕಜ ಜೊತೆಗೆ ಗಾಂಧಿನಗರದಲ್ಲಿ ವಾಸಿಸುತ್ತಿದ್ದಾರೆ.

ರೈಸನ್ ಪ್ರದೇಶದಲ್ಲಿ 80 ಮೀಟರ್ ರಸ್ತೆಗೆ ಪೂಜ್ಯ ಹೀರಾಬಾಯಿ ಮಾರ್ಗ ಎಂದು ಹೆಸರಿಸಲಾಗಿದೆ. ಜಗನ್ನಾಥ ದೇವಸ್ಥಾನದಲ್ಲಿ ಕುಟುಂಬದಿಂದ ಸಮುದಾಯ ಭೋಜನ ಆಯೋಜಿಸಲಾಗಿದೆ.

You might also like
Leave a comment