This is the title of the web page

ಸುವರ್ಣ ಸೌಧದೆದುರು ಶ್ಯಾವಿಗೆ ಒಣಗಲು ಹಾಕಿದ ಮಲ್ಲಮ್ಮಗೆ ಮನೆ

 

ಬೆಳಗಾವಿ, ೩- ಸುವರ್ಣ ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಶ್ಯಾವಿಗೆ ಒಣಗಲು ಹಾಕಿ ಉದ್ಯೋಗ ಕಳೆದುಕೊಂಡಿದ್ದ ಕೊಂಡಸಕೊಪ್ಪ ಗ್ರಾಮದ ಮಲ್ಲಮ್ಮನಿಗೆ ಶ್ಯಾವಿಗೆ ವರವಾಗಿ ಪರಿಣಮಿಸಿದ್ದು ಸರಕಾರ ಆಕೆಯನ್ನು ಉದ್ಯೋಗಕ್ಕೆ ಪುನಃ ನೇಮಿಸಿಕೊಂಡದ್ದಲ್ಲದೇ ಅವರ ವಾಸಕೊಂದು ಮನೆಯನ್ನೂ ಮಂಜೂರು ಮಾಡಿದೆ.

ಮಲ್ಲಮ್ಮ ಭಾತಖಾಂಡೆ ಅವರ ಕುರಿತು ವರದಿ ಪಡೆದಿದ್ದ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ಅತೀ ಚಿಕ್ಕ ಮನೆಯಲ್ಲಿ ವಾಸವಾಗಿರುವ ಅವರಿಗೆ ಅವರದೇ ಗ್ರಾಮದಲ್ಲಿ ಆಶ್ರಯ ಯೋಜನೆಯಡಿ ಮನೆಯೊಂದನ್ನು ಮಂಜೂರು ಮಾಡಿದ್ದಾರೆ. ಈ ಕುರಿತು ಪ್ರಕ್ರಿಯೆ ಕೂಡಲೇ ಸಿದ್ದಪಡಿಸುವಂತೆ ಬಸ್ತವಾಡ ಪಿಡಿಓ ಅವರಿಗೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಮಲ್ಲಮ್ಮ ಅವರಿಗೆ ಶ್ಯಾವಿಗೆ ತಂದುಕೊಟ್ಟು ಸೇವೆಯಿಂದ ವಜಾಗೊಂಡಿದ್ದ ಸಾಂಬ್ರಾ ಗ್ರಾಮದ ಸಾವಕ್ಕ ಅವರನ್ನೂ ಸಹ ಪುನಃ ಉದ್ಯೋಗಕ್ಕೆ ಮರು ನಿಯೋಜನೆ ಮಾಡಿಕೊಳ್ಳಲಾಗಿದೆ.

You might also like
Leave a comment