Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಪಶು ಆಹಾರ ಬೆಲೆಯಲ್ಲಿ ಭಾರಿ ಹೆಚ್ಚಳ


ಬೆಳಗಾವಿ, ೨೨- ಪಶು ಆಹಾರ ಧಾರಣೆಯಲ್ಲಿ ಭಾರಿ ಹೆಚ್ಚಳವಾಗಿದ್ದು, ದೀಪಾವಳಿಗೂ ಮುನ್ನ ಹೈನುಗಾರರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಿದೆ. ಕರ್ನಾಟಕ ಹಾಲು ಮಹಾ ಮಂಡಳಿ ಅಕ್ಟೋಬರ್ 19 ರಂದು ಈ ಕುರಿತು ಆದೇಶ ಹೊರಡಿಸಿದೆ.

50 ಕೆಜಿ ನಂದಿನಿ ಗೋಲ್ಡ ಪಶು ಆಹಾರದ ಬೆಲೆಯನ್ನು 1,040 ರೂಪಾಯಿಗಳಿಂದ 1,165 ರೂಪಾಯಿಗಳಿಗೆ ಹೆಚ್ಚಿಸಲಾಗಿದ್ದರೆ, ಬೈಪಾಸ್ ಪಶು ಆಹಾರದ ಬೆಲೆಯನ್ನು 1,160 ರೂಪಾಯಿಗಳಿಂದ 1,285 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ.

ಹಾಲಿನ ಬೆಲೆಯನ್ನು ಹೆಚ್ಚಿಸುವಂತೆ ಹೈನುಗಾರರು ಈ ಮೊದಲಿನಿಂದಲೂ ಮನವಿ ಮಾಡಿಕೊಂಡು ಬಂದಿದ್ದು, ಆದರೆ ಈ ಕುರಿತು ಈ ವರೆಗೆ ಯಾವುದೇ ನಿರ್ಧಾರ ಕೈಗೊಳ್ಳದಿರುವುದರ ಮಧ್ಯೆ ಇದೀಗ ಪಶು ಆಹಾರದ ಬೆಲೆ ಹೆಚ್ಚಿಸಿರುವುದು ಹೈನುಗಾರರಿಗೆ ಹೊಡೆತ ಬಿದ್ದಿದೆ.


Leave a Reply