This is the title of the web page

ಪತಿಯ ಮದ್ಯ ಸೇವನೆ ಚಟ ಬಿಡಿಸಲು ಔಷಧಿ ಹುಡುಕುತ್ತಿದ್ದ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ

ಬೆಳಗಾವಿ, 23- ಮದ್ಯಕ್ಕೆ ದಾಸರಾಗಿದ್ದ ಪತಿಯ ಕುಡಿತ ಬಿಡಿಸಲು ಔಷಧಿ ಕೊಡಿಸಲು ಪ್ರಯತ್ನಿಸುತ್ತಿದ್ದ ಮಹಿಳೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ನ್ಯಾಯವಾದಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಚಿಕ್ಕೋಡಿ ತಾಲೂಕಿನ ಕಬ್ಬೂರಿನ ನಿವಾಸಿಯಾಗಿರುವ ಚಿಕ್ಕೋಡಿ ನ್ಯಾಯಾಲಯಗಳಲ್ಲಿ ವೃತ್ತಿಯಲ್ಲಿರುವ ವಕೀಲರೊಬ್ಬರು ಈ ಮಹಿಳೆಯನ್ನು ಭೇಟಿಯಾಗಿ ನಿನ್ನೆ ಮಂಗಳವಾರ ತಮ್ಮ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ.

ಮಹಿಳೆ ಕೂಗಿಕೊಂಡಿದ್ದರಿಂದ ನೆರೆಹೊರೆಯವರು ಬಂದು ಮಹಿಳೆಯನ್ನು ಮನೆಯಿಂದ ಹೊರಗೆ ಕರೆದುಕೊಂಡು ಬಂದು ವಕೀಲರನ್ನು ಹಿಡಿದು ಕಬ್ಬೂರ ಉಪ ಪೊಲೀಸ ಠಾಣೆಗೆ ಒಪ್ಪಿಸಿದ್ದಾರೆ. ನಂತರ ಅವರನ್ನು ಚಿಕ್ಕೋಡಿ ಪೊಲೀಸರಿಗೆ ಒಪ್ಪಿಸಲಾಯಿತು.

ವಶಕ್ಕೆ ಪಡೆದ ನ್ಯಾಯವಾದಿಯ ಹೆಸರು ಸಂಜಯ ವಡ್ಡರಗಾವಿ ಎಂದು ಹೇಳಲಾಗಿದೆ.

You might also like
Leave a comment