This is the title of the web page

ಹಾಡುಹಗಲೇ ನಡುರಸ್ತೆಯಲ್ಲಿ ಪತ್ನಿಯನ್ನು ಕೊಚ್ಚಿ ಕೊಂದ

 

ಬೆಳಗಾವಿ, ೨೫- ತನ್ನಿಂದ ದೂರ ಇದ್ದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ ಪತ್ನಿಯನ್ನು ರಸ್ತೆಯಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಬೆಳಗಾವಿ ನಗರದ ಕೋಟೆ ಕೆರೆ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.

21 ವರುಷದ ಹೀನಾ ಕೌಸರ್ ಎಂಬಾಕೆಯನ್ನು ಬೈಲಹೊಂಗಲ ತಾಲ್ಲೂಕಿನ 34 ವರುಷದ ಮಂಜೂರ ನದಾಫ ಎಂಬವ ನಾಲ್ಕು ವರುಷದ ಹಿಂದೆ ವಿವಾಹವಾಗಿದ್ದ. ಆದರೆ ಕೌಟುಂಬಿಕ ಕಲಹದಿಂದ ಬೇಸತ್ತು ಪತಿಯಿಂದ ದೂರವಾಗಿ ಪಾಲಕರೊಂದಿಗೆ ಯುವತಿ ವಾಸವಾಗಿದ್ದಳು.

ಮಂಜೂರ್ ಅವರಿಂದ ವಿವಾಹ ವಿಚ್ಛೇದನ ಪಡೆಯಲು ಎಂಟು ತಿಂಗಳ ಹಿಂದೆ ಬೆಳಗಾವಿಯ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಆಕೆ ಸಲ್ಲಿಸಿದ್ದಳು. ಇಂದು ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ಮನೆಗೆ ತೆರಳುತ್ತಿದ್ದಾಗ ಪತಿ ಮಂಜೂರ್ ಆಕೆಯೊಂದಿಗೆ ವಾದ ಮಾಡಿದ್ದಾನೆ. ನಂತರ ಕೋಪದಿಂದ ತಾನು ತಂದಿದ್ದ ಮಚ್ಚಿನಿಂದ ಪತ್ನಿಯ ಕುತ್ತಿಗೆ, ಹೊಟ್ಟೆಗೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಹೀನಾ ರಸ್ತೆಯಲ್ಲೇ ಕೊನೆಯುಸಿರೆಳೆದಿದ್ದಾಳೆ.

ಪತಿ ಮಂಜೂರನನ್ನು ಪೊಲೀಸರು ಬಂಧಿಸಿದ್ದಾರೆ.

You might also like
Leave a comment