This is the title of the web page

ಪತಿ – ಪತ್ನಿ ಜಗಳ; ಗಂಡನ ಕೊಲೆಯಲ್ಲಿ ಅಂತ್ಯ 

 

ಬೆಳಗಾವಿ, ೧೭- ಬೇರೆ – ಬೇರೆಯಾಗಿ ವಾಸಿಸುತ್ತಿದ್ದ ಪತಿ ಪತ್ನಿಯರ ಜಗಳ ಪತಿಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿ ನಗರದ ಬಿಕೆ ಕಂಗ್ರಾಳಿಯಲ್ಲಿ ನಡೆದಿದೆ.

42 ವರ್ಷದ ಪೇಂಟರ್ ದೀಪಕ ಪಾಂಡುರಂಗ ವಾಕೆ ಕೊಲೆಯಾದ ದುರ್ದೈವಿ. ಇವರು ಹನುಮಾನ ನಗರದಲ್ಲಿ ವಾಸವಾಗಿದ್ದರು. ಪತ್ನಿ ದೀಪಾ ಮಕ್ಕಳಾದ 15 ವರ್ಷದ ದಿನೇಶ ಮತ್ತು 12 ವರ್ಷದ ದಿಯಾ ಅವರನ್ನು ಕರೆದುಕೊಂಡು ಬಿಕೆ ಕಂಗ್ರಾಳಿ ಯಲ್ಲಿ ತಾನಾಜಿ ತಾಯಿಯ ಮನೆಯಲ್ಲಿ ಆರು ತಿಂಗಳಿಂದ ವಾಸವಾಗಿದ್ದರು.

ರಾತ್ರಿ ಸುಮಾರು 10 ಗಂಟೆಗೆ ಚಾಕುವೊಂದನ್ನು ತೆಗೆದುಕೊಂಡು ಹೆಂಡತಿ ಮನೆಗೆ ಹೋಗಿದ್ದ ದೀಪಕ ಎದುರಿಗೆ ಬಂದ 68 ವರ್ಷದ ಅತ್ತೆ ಯಲ್ಲುಭಾಯಿ ಹಾಗೂ ಮಕ್ಕಳಾದ ದಿನೇಶ ಮತ್ತು ದಿಯಾ ಮೇಲೆ ಚಾಕುವಿನಿಂದ ಕೈ, ತಲೆ, ಎದೆಗೆ ಚುಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

ತಕ್ಷಣ ಮನೆಯಿಂದ ಹೊರಗೆ ಓಡಿಹೋದ ದೀಪಾ ತನ್ನ ದೊಡ್ಡಪ್ಪನ ಮಕ್ಕಳಾದ ಚೇತನ ಮತ್ತು ಸುಶಾಂತರನ್ನು ಕರೆಯುತ್ತಿದ್ದಂತೆ ಅವರು ಬಂದು ದೀಪಕನಿಗೆ ಮಾರಕಾಸ್ತ್ರಗಳಿಂದ ಹೊಡೆದಿದ್ದಾರೆ.

ಗಂಭೀರವಾಗಿ ಗಾಯಗೊಂಡು ಬಿದ್ದಿದ್ದ ಈತನನ್ನು ಕಾಕತಿ ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ದೀಪಕ ಅಸು ನೀಗಿದ್ದಾನೆ. ಕಾಕತಿ ಪೂಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You might also like
Leave a comment