This is the title of the web page

ಬಿಜೆಪಿ ಅಧಿಕಾರಕ್ಕೆ ಬಂದರೆ 50ರೂ. ಗೆ ಒಂದು ಬಾಟ್ಲಿ ಶೆರೆ

ಅಮರಾವತಿ, 30- ಆಂಧ್ರಪ್ರದೇಶದಲ್ಲಿ 2024ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ 50 ರೂ.ಗೆ ಒಂದು ಬಾಟಲಿ ಮದ್ಯ ನೀಡುವುದಾಗಿ ಭರವಸೆ ನೀಡಿದೆ.

ಮಂಗಳವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ಮುಖ್ಯಸ್ಥ ಸೋಮು ವೀರರಾಜು ಮಾತನಾಡಿ, ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷ ತೆಲುಗು ದೇಶಂ ಪಕ್ಷವು ಹೇರಳವಾದ ಸಂಪನ್ಮೂಲಗಳು ಮತ್ತು ದೀರ್ಘ ಸಮುದ್ರ ತೀರವನ್ನು ಹೊಂದಿದ್ದರೂ ರಾಜ್ಯವನ್ನು ಅಭಿವೃದ್ಧಿಪಡಿಸುವಲ್ಲಿ ‘ವಿಫಲವಾಗಿವೆ’ ಎಂದು ಹೇಳಿದರು.

“ರಾಜ್ಯದಲ್ಲಿ ಒಂದು ಕೋಟಿ ಜನರು ಕುಡಿಯುತ್ತಿದ್ದಾರೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ. ರಾಜ್ಯದಲ್ಲಿ ನೀವೆಲ್ಲರೂ ಬಿಜೆಪಿಗೆ ಮತ ಹಾಕಿ, ನಿಮಗೆ 75 ರೂ.ಗೆ ಅಗ್ಗದ ಮದ್ಯ ನೀಡುತ್ತೇವೆ. ಆದಾಯ ಚೆನ್ನಾಗಿದ್ದರೆ ಕೇವಲ 50 ರೂ.ಗೆ ಪೂರೈಕೆ ಮಾಡುತ್ತೇವೆ ಎಂದು ವೀರರಾಜು ಅವರು ಆಂಧ್ರಪ್ರದೇಶ ರಾಜ್ಯದಲ್ಲಿ ಸಾರಾಯಿ ಬೆಲೆ ಹೆಚ್ಚಿರುವುದನ್ನು ಪರೋಕ್ಷವಾಗಿ ಹೇಳಿದರು.

ರಾಜ್ಯ ಸರ್ಕಾರದ ಕೆಲವು ನೇರ ಲಾಭ ವರ್ಗಾವಣೆ ಯೋಜನೆಗಳನ್ನು ಉಲ್ಲೇಖಿಸಿದ ಬಿಜೆಪಿ ನಾಯಕ, ಒಬ್ಬ ವ್ಯಕ್ತಿಯು ತಿಂಗಳಿಗೆ ಸರಾಸರಿ 12,000 ರೂ. ಸಾರಾಯಿ ಸೇವಿಸುತ್ತಾನೆ ಮತ್ತು ಜಗನ್ ಮೋಹನ್ ರೆಡ್ಡಿ ಆ ಮೊತ್ತವನ್ನು ಸಂಗ್ರಹಿಸಿ ಯೋಜನೆಯ ಹೆಸರಿನಲ್ಲಿ ಹಿಂತಿರುಗಿಸುತ್ತಿದ್ದಾರೆ ಎಂದು ಹೇಳಿದರು.

You might also like
Leave a comment