Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

State News

ಹಬ್ಬಗಳಲ್ಲಿ ದರ ಹೆಚ್ಚಿಸಿದರೆ ಲೈಸೆನ್ಸ ರದ್ದು -ಸಾರಿಗೆ ಮಂತ್ರಿ


ಯಾದಗಿರಿ, ೨೦- ಹಬ್ಬಗಳೂ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಬಸ್ ಗಳ ಪ್ರಯಾಣ ದರವನ್ನು ಮನಬಂದಂತೆ ಹೆಚ್ಚಿಸಿ ಪ್ರಯಾಣಿಕರನ್ನು ಸುಲಿಗೆ ಮಾಡುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದ್ದು ಜನರು ಹಿಡಿಶಾಪ ಹಾಕುತ್ತಲೇ ಅನಿವಾರ್ಯವಾಗಿ ಪ್ರಯಾಣಿಸಬೇಕಾಗುತ್ತದೆ.

ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದರೂ ಸಹ ಕೆಲ ಬಸ್ ಮಾಲೀಕರು ಅದಕ್ಕೆ ಕ್ಯಾರೆ ಎನ್ನುವುದಿಲ್ಲ. ದೀಪಾವಳಿಗಾಗಿ ತಮ್ಮ ತಮ್ಮ ಊರುಗಳಿಗೆ ತೆರಳಲು ಪ್ರಯಾಣಿಕರು ಸಿದ್ದರಾಗುತ್ತಿದ್ದಾರೆ. ಹೀಗಾಗಿ ಮತ್ತೆ ಬಸ್ ಪ್ರಯಾಣದರ ಮನಬಂದಂತೆ ಹೆಚ್ಚಿಸುವ ಬಗ್ಗೆ ಸಚಿವ ಶ್ರೀರಾಮುಲು ಎಚ್ಚರಿಕೆಯೊಂದನ್ನು ನೀಡಿದ್ದಾರೆ.

ಪ್ರಯಾಣಿಕರನ್ನು ಸುಲಿಗೆ ಮಾಡುವ ಖಾಸಗಿ ಬಸ್ಸುಗಳ ಪರವಾನಗಿಯನ್ನೇ ರದ್ದುಗೊಳಿಸುವುದಾಗಿ ತಿಳಿಸಿದ್ದಾರೆ.

ಯಾದಗಿರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಟಾಸ್ಕಫೋರ್ಸ್ ರಚನೆ ಮಾಡಲಾಗುತ್ತದೆ. ಅಲ್ಲದೇ ಚೆಕ್ ಪೋಸ್ಟ ಗಳನ್ನು ಸಹ ಹೆಚ್ಚಿಸಿ ಬಸ್ಸುಗಳ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.


Leave a Reply