This is the title of the web page

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನವಿರೋಧಿ ಕಾಯ್ದೆಗಳೆಲ್ಲ ವಾಪಸ್

ಬೆಳಗಾವಿ, 23- 2023ರಲ್ಲಿ ಕಾಂಗ್ರೆಸ್ ಖಂಡಿತವಾಗಿ ಪುನಃ ಅಧಿಕಾರಕ್ಕೆ ಬರಲಿದ್ದು ಆಗ ಬಿಜೆಪಿ ಸರಕಾರ ಜಾರಿಮಾಡಿರುವ ಮತಾಂತರ ನಿಷೇಧ ಕಾಯ್ದೆಯೂ ಸೇರಿದಂತೆ ಎಲ್ಲ ಜನವಿರೋಧಿ ಮಸೂದೆಗಳನ್ನು ಹಿಂದಕ್ಕೆ ಪಡೆಯುವದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹೇಳಿದರು.

ಬೆಳಗಾವಿಯಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಜನವಿರೋಧಿ, ದ್ವೇಷದ ಆಡಳಿತದಿಂದ ಬೇಸತ್ತ ಜನ ಅದನ್ನು ತಿರಸ್ಕರಿಸಿ ಪುನಃ ಕಾಂಗ್ರೆಸ್ ಅಧಿಕಾರಕ್ಕೆ ತರಲಿದ್ದಾರೆ. ಆಗ ಬಿಜೆಪಿಯ ಸಕಲ ಜನವಿರೋಧಿ, ಸ್ವಾರ್ಥಪರ ಮಸೂದೆಗಳನ್ನು ಹಿಂದಕ್ಕೆ ಪಡೆಯಲಾಗುವದು ಎಂದರು.

ಪಕ್ಷಕ್ಕೆ ವಿಧಾನಸಭೆಯಲ್ಲಿ ಬಹುಮತವಿಲ್ಲ. ಹಾಗಾಗಿ ಮತಾಂತರ ನಿಷೇದ ಕಾಯ್ದೆ ಪಾಸ್ ಆಗಬಹುದು. ಆದರೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿಗೆ ಬಹುಮತವಿಲ್ಲ. ಹಾಗಾಗಿ ಈ ಅಧಿವೇಶನದಲ್ಲಿ ಮಸೂದೆ ಮಂಜೂರಾಗುವ ಸಾಧ್ಯತೆಯಿಲ್ಲ. ಈಗಿನ ಪರಿಷತ್ ಸದಸ್ಯರ ಅವಧಿ ಜನೆವರಿ ಮೊದಲ ವಾರದಲ್ಲಿ ಕೊನೆಗೂಳ್ಳಲ್ಲಿದ್ದು ಮುಂದಿನ ಅಧಿವೇಶನದಲ್ಲಿ ಪರಿಷತ್ ನಲ್ಲೂ ಮಂಜೂರಾಗಬಹುದು. ಏನೇ ಆದರೂ 2023ರಲ್ಲಿ ಅವೆಲ್ಲ ತೆಗೆದು ಹಾಕುತ್ತೆವೆಂದು ಅವರು ತಿಳಿಸಿದರು.

You might also like
Leave a comment