This is the title of the web page

ಲಿಟ್ಲ್ ಪಾಮ್ಸ ಚಿಣ್ಣರ ಶಾಲೆ ಉದ್ಘಾಟನೆ

 

ಬೆಳಗಾವಿ, ಮೇ ೨೧- ನಗರದ ವೈಭವ ನಗರ ಪ್ರದೇಶದ ಬಾಕ್ಸೈಟ್ ರಸ್ತೆಯಲ್ಲಿ ಲಿಟ್ಲ್ ಪಾಮ್ಸ ನೂತನ ಚಿಣ್ಣರ ಶಾಲೆ ಶುಕ್ರವಾರ ಉದ್ಘಾಟನೆಗೊಂಡಿತು.

ಬಸವ ಜ್ಞಾನ ದೇಗುಲ ಶಿಕ್ಷಣ ಹಾಗೂ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಆರಂಭಿಸಲಾದ ಈ ಚಿಣ್ಣರ ಶಾಲೆಯನ್ನು ಕಾರಂಜಿಮಠದ ಶ್ರೀ ಗುರುಸಿದ್ಧ ಮಹಾಸ್ವಾಮೀಜಿ ಅವರು ಉದ್ಘಾಟಿಸಿದರು.

ಬಸವ ಜ್ಞಾನ ದೇಗುಲ ಶಿಕ್ಷಣ ಹಾಗೂ ಸಮಾಜ ಸೇವಾ ಸಂಸ್ಥೆಯ ವತಿಯಿಂದ ಆರಂಭಿಸಲಾದ ಎರಡನೇ ಶಾಲೆ ಇದಾಗಿದೆ.

ಕಾರ್ಯಕ್ರಮದಲ್ಲಿ ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಶಾಸಕ ಅನೀಲ ಬೆನಕೆ, ವಿಧಾನ ಪರಿಷತ್ ಸದಸ್ಯರಾದ ಸಾಬಣ್ಣ ತಳವಾರ, ಹಣಮಂತ ನಿರಾಣಿ, ನಗರಸೇವಕ ಹನಮಂತ ಕೊಂಗಾಲಿ, ಶಾಲಾ ಆಡಳಿತ ಮಂಡಳಿಯ ನಿರ್ದೇಶಕರಾದ ಮಹಾಂತೇಶ ವಕ್ಕುಂದ, ಪ್ರತಿಭಾ ವಕ್ಕುಂದ, ಸುಮಿತಾ ನಾಯರ, ನಟರಾಜ ಮಲ್ಲಯ್ಯಗೋಳ, ಐಶ್ವರ್ಯ ಮುಳಕುರಿ, ಶಿವಾನಂದ ಮುಳಕುರಿ, ಶ್ರೀಮತಿ ವರ್ಜನ್ನವರ ಉಪಸ್ಥಿತರಿದ್ದರು.

ವಿಶಿಷ್ಟವಾದ ಮೌಲ್ಯಯುತ ಶಿಕ್ಷಣ ನೀಡುವ ಗುರಿಯೊಂದಿಗೆ ಆರಂಭಿಸಲಾಗಿರುವ ಚಿಣ್ಣರ ಶಾಲೆಗೆ ಸಾರ್ವಜನಿಕರು ಪ್ರೋತ್ಸಾಹ ಹಾಗೂ ಬೆಂಬಲ ನೀಡಬೇಕೆಂದು ಶಾಲಾ ಆಡಳಿತ ಮಂಡಳಿಯವರು ಕೋರಿದರು.

You might also like
Leave a comment