This is the title of the web page

ಮೈಸೂರಿನಲ್ಲಿ ಪ್ರಧಾನಿ ಮೋದಿ ಯೋಗದ ಇಂಚಿಚು ಮಾಹಿತಿ

 

 

ಮೈಸೂರು: ‘ಮಾನವೀಯತೆಗಾಗಿ ಯೋಗ’ ಘೋಷವಾಕ್ಯದಡಿ ಮೈಸೂರಿನ ಅರಮನೆ ಆವರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಪ್ರಧಾನಿ ಮೋದಿ 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಮಾಡಿ ಗಮನಸೆಳೆದರು.

ಹದಿನೈದು ಸಾವಿರಕ್ಕೂ ಹೆಚ್ಚು ಜನರು ಅರಮನೆ ಆವರಣದಲ್ಲಿ ಯೋಗಾಭ್ಯಾಸ ಮಾಡಿದರು. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಯೋಗಭ್ಯಾಸ ಪ್ರದರ್ಶನ 7:45ರ ವರೆಗೂ ನಡೆಯಿತು. ಯೋಗಾಭ್ಯಾಸ ಮಾಡಿದ 15 ಸಾವಿರ ಜನರಲ್ಲಿ 1200 ಶಾಲಾ ಮಕ್ಕಳಿದ್ದರು.

ರಾಜ್ಯಪಾಲ ಥಾವರ ಚಂದ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಸರ್ಬಾನಂದ ಸೋನಾವಾಲ್, ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ, ಆರೋಗ್ಯ ಸಚಿವ ಡಾ.ಸುಧಾಕರ, ಸಂಸದ ಪ್ರತಾಪ್ ಸಿಂಹ, ರಾಣಿ ಪ್ರಮೋದಾದೇವಿ, ಯದುವೀರ , ಶಾಸಕ ಎಲ್ ನಾಗೇಂದ್ರ, ಎಸ್.ಎ ರಾಮದಾಸ್, ಮೂಡಾ ಅಧ್ಯಕ್ಷ ಎಂವಿ ರಾಜೀವ್ ಅವರು ಕೂಡ ಯೋಗಾಭ್ಯಾಸದಲ್ಲಿ ಪಾಲ್ಗೊಂಡಿದ್ದರು.

 

ಇನ್ನು ಈ ಯೋಗ ಪ್ರದರ್ಶನದಲ್ಲಿ 19 ಆಸನಗಳು ಪ್ರದರ್ಶನಗೊಂಡವು. ಇದರಲ್ಲಿ ಆರಂಭದಲ್ಲಿ ಒಂದು ನಿಮಿಷ ಪ್ರಾರ್ಥನೆ, 4 ನಿಮಿಷ ಚಲನಕ್ರಿಯೆ, 25 ನಿಮಿಷಗಳ ತಾಡಾಸನ, ವೃಕ್ಷಾಸನ, ಪಾದಹಸ್ತಾಸನ-1, ಪಾದಹಸ್ತಾಸನ-2, ಅರ್ಧಚಕ್ರಾಸನ, ಸಮದಂಡಾಸನ, ಭದ್ರಾಸನ, , ಅರ್ಧಉಷ್ಟ್ರಾಸನ, ವಜ್ರಾಸನಉಷ್ಟ್ರಾಸನ, ತ್ರಿಕೋನಾಸನ, ಶಶಂಕಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಮಕರಾಸನ, ಸರಳ ಭುಜಂಗಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಅರ್ಧಹಲಾಸನ, ಪವನಮುಕ್ತಾಸನ, ಶವಾಸನ ಮಾಡಲಾಯಿತು. ಬಳಿಕ 14 ನಿಮಿಷ ಪ್ರಾಣಾಯಾಮ, ಧ್ಯಾನ, ಸಂಕಲ್ಪ. ಶಾಂತಿಮಂತ್ರ, ಸಂಕಲ್ಪ ನಡೆಯಿತು.

 

ಯೋಗ ದಿನದ ಕುರಿತು ಮಾತನಾಡಿದ ಪ್ರಧಾನಿ ಅವರು, ಇಂದು ವಿಶ್ವದಲ್ಲಿರುವ ಪ್ರತಿ ಮನೆ ಮನೆಗೂ ಯೋಗ ತಲುಪಿದೆ. ಯೋಗವೆಂಬುದು ಸಹಜ ಮಾನವೀಯ ಚೈತನ್ಯವಾಗಿದೆ. ಕೊರೊನಾ ನಂತರ ಎರಡು ವರ್ಷಗಳ ಬಳಿಕ ಮತ್ತೆ ಯೋಗ ಪರ್ವ ಆರಂಭವಾಗಿದೆ ಎಂದರು.

ಯೋಗವನ್ನು ಅರಿತುಕೊಳ್ಳುವುದು ಅಷ್ಟೇ ಅಲ್ಲ ಅದನ್ನು ಜೀವನದ ಅವಿಭಾಜ್ಯ ಅಂಗವಾಸಬೇಕು.. ಕೇವಲ ಯೋಗ ದಿನ ಮಾತ್ರವಲ್ಲದೆ ಎಲ್ಲ ದಿನವೂ ಕೂಡ ಯೋಗದ ಮೂಲಕ ಸ್ವಾಸ್ಥ್ಯ, ಸುಖ ಮತ್ತು ಶಾಂತಿಯನ್ನು ಅನುಭವಿಸಬೇಕು ಎಂದು ಸಲಹೆ ನೀಡಿದರು.

You might also like
Leave a comment