This is the title of the web page

ಕನ್ನಡ ನಾಮಫಲಕಗಳಿಗೆ ಮಸಿ

ಬೆಳಗಾವಿ, 16- ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಕಂಗ್ರಾಳಿ ಗ್ರಾಮದ ಹೊರವಲಯದಲ್ಲಿ ಸಾರ್ವಜನಿಕ ಕಾಮಗಾರಿ ಇಲಾಖೆ (ಪಿಡಬ್ಲ್ಯೂ ಡಿ ) ರಸ್ತೆಬದಿ ಸಿಮೆಂಟ್ ಕಾಂಕ್ರೀಟ್ ನಿಂದ ಎರಡು ನಾಮಫಲಕಗಳನ್ನು ಕಟ್ಟಿ ಅವುಗಳ ಮೇಲೆ ವಾಹನ ಚಾಲಕರಿಗೆ ರಸ್ತೆ ಸುರಕ್ಷತೆ ನಿಯಮ ಕುರಿತು ಕನ್ನಡದಲ್ಲಿ  ಬರೆದಿದ್ದರು. ನಾಡವಿರೋಧಿ ಕನ್ನಡ ದ್ವೇಷಿಗಳು ಅವುಗಳನ್ನು ಕಪ್ಪು ಹಾಗೂ ಕೆಂಪು ಬಣ್ಣಗಳಿಂದ ಅಳಸಿಹಾಕಿದ್ದಾರೆ.

ಇತ್ತೀಚಿಗೆ ಮುಕ್ತಾಯಗೊಂಡ ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಬೆಳಗಾವಿಯ ಅನಗೋಳ ಪ್ರಾಂತದಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಒಡೆದುಹಾಕಿದ್ದ ಘಟನೆ ಹಸಿರಾಗಿರುವಾಗಲೇ ಅಂತಹದೇ ಮತ್ತೊಂದು ಘಟನೆ ಸಂಭವಿಸಿದೆ.

You might also like
Leave a comment