This is the title of the web page

ಬೆಳಗಾವಿ ಅಧಿವೇಶನ ಕೈ ಬಿಡುವದೇ ಒಳ್ಳೆಯದು

ಕಾರವಾರ, 1- ಕೊರೋನಾ ವೈರಸ್ ನ ರೂಪಾಂತರಿ ತಳಿಯ ಹರಡುವಿಕೆಯ ಭಯ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿನ ನಿಯೋಜಿತ ವಿಧಾನಮಂಡಲ ಅಧಿವೇಶನವನ್ನು ಕೈ ಬಿಡುವದು ಒಳ್ಳೆಯದು ಎಂದು ಹಿರಿಯ ಕಾಂಗ್ರೆಸ್ ನಾಯಕ ಆರ್ ವಿ ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.

ಕಾರವಾರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಧಾರವಾಡ ಮತ್ತು ಬೆಳಗಾವಿ ಭಾಗದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳವಾಗುತ್ತಿದೆ. ಬೆಳಗಾವಿ ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವುದರಿಂದ ಸಮಸ್ಯೆ ಎದುರಾಗಬಹುದು. ಕಾರಣ ಸರ್ಕಾರ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಮರುಪರಿಶೀಲನೆ ಮಾಡಬೇಕು ಎಂದು ಹೇಳಿದರು.

ಬೆಳಗಾವಿಯಲ್ಲಿಯೇ ಅಧಿವೇಶನ ನಡೆಸಬೇಕು ಎಂದು ಈ ಹಿಂದೆ ಕಾಂಗ್ರೆಸ್ ಹೋರಾಟ ಮಾಡಿತ್ತು. ಆದರೆ ನೆರೆಯ ಮಹಾರಾಷ್ಟ್ರದಲ್ಲಿ ಕೋವಿಡ್​ ಆತಂಕ ಹೆಚ್ಚಾಗಿದೆ. ಉತ್ತರ ಕರ್ನಾಟಕ ಭಾಗದಿಂದ ಅಧಿವೇಶನಕ್ಕೆ ಸಾವಿರಾರು ಜನ ಆಗಮಿಸುತ್ತಾರೆ. ಈಗಾಗಲೇ ಕೋವಿಡ್ ಭಯ ಇರುವುದರಿಂದ ಸರ್ಕಾರ ಯೋಚಿಸಿ ಅಗತ್ಯ ಮುಂಜಾಗ್ರತಾ ಕ್ರಮದೊಂದಿಗೆ ಅಧಿವೇಶನ ನಡೆಸಬೇಕು ಎಂದರು.

ಚಳಿಗಾಲದ ಅಧಿವೇಶನವನ್ನು ಮುಂದೆ ಹಾಕದೇ ಬೆಂಗಳೂರಿನಲ್ಲಿಯೇ ನಡೆಸುವುದು ಸೂಕ್ತ. ಸರ್ಕಾರ ಈ ಬಗ್ಗೆ ಪರಾಮರ್ಶೆ ಮಾಡಲಿ ಎಂದರು.

You might also like
Leave a comment