Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

National News

ಹುಡುಗಿಯರನ್ನು ಐಟಂ ಎನ್ನುವುದು ಅವಹೇಳನಕಾರಿ 

mumbai highcourt

ಮುಂಬೈ : ಹುಡುಗಿಯನ್ನು ಐಟಂ ಎಂದು ಕರೆಯುವುದು ಅವಹೇಳನಕಾರಿಯಾಗಿದ್ದು, ಇದು ಆಕೆಯನ್ನು ಲೈಂಗಿಕವಾಗಿ ಗುರಿಯಾಗಿಸಿ ಅಪಮಾನ ಮಾಡುವ ಉದ್ದೇಶವನ್ನು ಹೊಂದಿದೆ ಎಂದು ಮುಂಬೈ ವಿಶೇಷ ಕೋರ್ಟ ಅಭಿಪ್ರಾಯಪಟ್ಟಿದೆ.

ಪ್ರಕರಣ ಒಂದರ ವಿಚಾರಣೆ ವೇಳೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ.ಜೆ.ಅನ್ಸಾರಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಾಲಕಿಗೆ ಕಿರುಕುಳ ನೀಡಿದ ಯುವಕನಿಗೆ ಒಂದೂವರೆ ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

2015ರ ಜುಲೈ 14ರಂದು ಮುಂಬೈ ಹೊರವಲಯದಲ್ಲಿ ಯುವಕನೊಬ್ಬ ಹದಿನಾರು ವರ್ಷದ ಬಾಲಕಿ ಶಾಲೆಯಿಂದ ಹಿಂದಿರುಗುತ್ತಿದ್ದಾಗ ಆಕೆಗೆ ಐಟಂ ಎಂದು ಕರೆದಿದ್ದಲ್ಲದೇ ಜಡೆಯನ್ನು ಹಿಡಿದು ಎಳೆದಾಡಿ, ಅಪಮಾನ ಮಾಡಿದ್ದಾನೆ.

ಈ ಹಿನ್ನಲೆಯಲ್ಲಿ ಯುವಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಈ ಕುರಿತು ವಿಶೇಷ ನ್ಯಾಯಾಲಯದಲ್ಲಿ ಸುಧೀರ್ಘಕಾಲ ವಿಚಾರಣೆ ನಡೆದು ಈಗ ತೀರ್ಪು ಹೊರಬಿದ್ದಿದೆ.


A B Dharwadkar
the authorA B Dharwadkar

Leave a Reply