This is the title of the web page

ವೇಣುಧ್ವನಿ ಬಾನುಲಿ ಕೇಂದ್ರಕ್ಕೆ ಪತ್ರಿಕೋದ್ಯಮ ವಿದ್ಯಾರ್ಥಿಗಳ ಭೇಟಿ

 

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಕೆಎಲ್‍ಇ ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರಕ್ಕೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಬಾನುಲಿ ಕೇಂದ್ರದ ಸಿಬ್ಬಂದಿ ಮಂಜುನಾಥ ಮಾತನಾಡಿ, ಸಮುದಾಯ ಬಾನುಲಿ ಕೇಂದ್ರದ ಮಹತ್ವ, ಕಾರ್ಯವೈಖರಿ ಮತ್ತು ಗುಣಲಕ್ಷಣಗಳನ್ನು ತಿಳಿಸಿದರು. ಬಾನುಲಿ ಕೇಂದ್ರದಲ್ಲಿ ಕಾರ್ಯಕ್ರಮ ರಿರ್ಕಾಂಡಿಗ್, ಎಡಿಟಿಂಗ್ ಮತ್ತು ಬ್ರಾಡ್‍ಕಾಸ್ಟ್ ಸೇರಿದಂತೆ ಬಾನುಲಿ ಕಾರ್ಯಕ್ರಮ ನಿರ್ಮಾಣ ಮತ್ತು ಪ್ರಸಾರದ ವಿವಿಧ ಹಂತಗಳ ಸಂಪೂರ್ಣ ಮಾಹಿತಿಗಳನ್ನುವಿದ್ಯಾರ್ಥಿಗಳಿಗೆ ತಿಳಿಸಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ, ಬದುಕಿನ ಯಶಸ್ಸಿನ ಸೂತ್ರಗಳು ಹೀಗೆ ಅನೇಕ ವಿಷಯಗಳ ಕುರಿತು ಕಾರ್ಯಕ್ರಮ ನೀಡಿದರು.

ವಿಭಾಗದ ಮುಖ್ಯಸ್ಥೆ ಪ್ರೊ. ಕಮಲಾಕ್ಷಿ ತಡಸದ ಮಾತನಾಡಿ, ಉತ್ತರ ಕರ್ನಾಟಕ ಮತ್ತು ಗಡಿಭಾಗದ ಪ್ರಗತಿಗಾಗಿ ಕೆಎಲ್‍ಇ ಸಂಸ್ಥೆ ಅಪಾರ ಕೊಡುಗೆ ನೀಡಿದೆ. ಇದೆ ರೀತಿ ಸಮುದಾಯ ಬಾನುಲಿ ಕೇಂದ್ರ ಸ್ಥಾಪಿಸಿ, ಗಡಿಭಾಗದ ಜನರ ಬದುಕಿಗೆ ನವ ಚೈತನ್ಯ ಒದಗಿಸಿದೆ. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಈ ಸಮುದಾಯ ಬಾನುಲಿ ಕೇಂದ್ರಕ್ಕೆ ನಿರಂತರ ಕಾರ್ಯಕ್ರಮ ನೀಡವುದರ ಮೂಲಕ ತಮ್ಮ ಮಾಧ್ಯಮ ವೃತ್ತಿಗೆ ಅವಶ್ಯವಿರುವ ಕೌಶಲಗಳನ್ನು ವೃದ್ಧಿಸಿಕೊಳ್ಳಬೇಕು ಎಂದರು.
ವಿಭಾಗದ ಬೋಧನಾ ಸಿಬ್ಬಂದಿಗಳಾದ ವಿದ್ಯಾಶ್ರೀ ಹಾಲಕೇರಿಮಠ, ಪೂಜಾ ಹೆಗಡೆ ಮತ್ತು ಅರುಣ ಹೊಸಮಠ ಉಪಸ್ಥಿತರಿದ್ದರು.

You might also like
Leave a comment