This is the title of the web page

ಹುಕ್ಕೇರಿ ಸರಕಾರಿ ಆಸ್ಪತ್ರೆಗೆ ನ್ಯಾಯಾಧೀಶರ ದಿಢೀರ್ ಭೇಟಿ, ತಪಾಸಣೆ 

 

ಹುಕ್ಕೇರಿ : ಹುಕ್ಕೇರಿ ನ್ಯಾಯಾಲಯದ ಹಿರಿಯ ದಿವಾಣಿ ನ್ಯಾಯಾಧೀಶ ಕೆ ಎಸ್ ರೊಟ್ಟೆರ ಮತ್ತು ಕಿರಿಯ ನ್ಯಾಯಾಧೀಶ ಕೆ ಅಂಬಣ್ಣಾ ಅವರು ಸರಕಾರಿ ಆಸ್ಪತ್ರೆಗೆ ಗುರುವಾರ ಆಕಸ್ಮಿಕವಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಚಿಕಿತ್ಸೆ ಸೇರಿದಂತೆ ಸರ್ಕಾರಿ ಆಸ್ಪತ್ರೆಯಲ್ಲಿನ ಸೌಲಭ್ಯಗಳು ರೋಗಿಗಳಿಗೆ ಸಮರ್ಪಕವಾಗಿ ಸಿಗುತ್ತಿರುವ  ಬಗ್ಗೆ ಪರಿಶೀಲನೆ ನಡೆಸಿದರು.

ವೈದ್ಯರ ತಪಾಸಣಾ ಕೊಠಡಿ, ರಕ್ತ ಸಂಗ್ರಹಣಾ ಬ್ಯಾಂಕ್ , ಔಷಧ ವಿತರಣೆ ಕೇಂದ್ರ, ರಕ್ತ ತಪಾಸಣಾ ಲ್ಯಾಬೋರೇಟರಿ, ಎಕ್ಸ್ ರೇ ಯುನಿಟ್ ಸೇರಿದಂತೆ ಮಹಿಳೆಯರ ಪ್ರಸೂತಿ ಕೇಂದ್ರಗಳನ್ನು ಪರಿಶೀಲನೆ ನಡೆಸಿದರು. ಜೊತೆಗೆ ಮುಖ್ಯ ವೈದ್ಯಾಧಿಕಾರಿ ಮಹಾಂತೇಶ ನರಸನ್ನವರ ಮತ್ತು ಡಾ. ರಿಯಾಜ ಮಕಾನದಾರ ಅವರಿಂದ ಮಾಹಿತಿ ಪಡೆದರು.

ಔಷಧಿ ಸಂಗ್ರಹಣಾ ಉಗ್ರಾಣ ಅವ್ಯವಸ್ಥೆ ಕಂಡು ಅಸಮಾಧಾನ ವ್ಯಕ್ತ ಪಡಿಸಿ ಒಂದು ವಾರದಲ್ಲಿ ಸರಿಮಾಡುವಂತೆ ಸೂಚನೆ ನೀಡಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ನ್ಯಾಯಾಧೀಶರು, ಉಚ್ಚ ನ್ಯಾಯಾಲಯದ ಆದೇಶದಂತೆ ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ಆಕಸ್ಮಿಕ ಭೇಟಿ ನೀಡಿ ವ್ಯವಸ್ಥೆ ಯನ್ನು ಪರಿಶೀಲನೆ ಮಾಡಿದ್ದೇವೆ ಹಾಗೂ ರೋಗಿಗಳೊಂದಿಗೆ ಚಿಕಿತ್ಸೆ ಕುರಿತು ಮಾಹಿತಿ ಪಡೆದುಕೊಂಡ ಪ್ರಕಾರ ಇಲ್ಲಿಯ ವೈದ್ಯರು ತಮಗೆ ನೀಡಿದ ಸೌಲಭ್ಯಗಳಲ್ಲಿ ತೃಪ್ತಿಕರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವು ನ್ಯೂನ್ಯತೆಗಳನ್ನು ಅವುಗಳನ್ನು ಸರಿಪಡಿಸಲು ಆದೇಶಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ಉದಯ ಸಿಂಗ್ ಹಜಾರೆ, ಆರ್ ಹರೀಶ, ಸತೀಶ ಚೌಗಲಾ ಹಾಗೂ ನ್ಯಾಯವಾದಿಗಳು ಉಪಸ್ಥಿತರಿದ್ದರು.

You might also like
Leave a comment