This is the title of the web page

ಕರಡಿಗುದ್ದಿ ಗುಂಪು ಘರ್ಷಣೆ; ೪ ಬಂಧನ

 

ಬೆಳಗಾವಿ, ೧- ಬೆಳಗಾವಿ ತಾಲೂಕು ಕರಡಿಗುದ್ದಿ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಓರ್ವ ಸಾವನ್ನಪ್ಪಿ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ತಿಳಿಸಿದ್ದಾರೆ.

ಬೆಳಗಾವಿಯ ಕರಡಿಗುದ್ದಿಯ ಸಮೀಪ ನಿನ್ನೆ ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದ ಘಟನೆ ಕುರಿತು ಮಾಹಿತಿ ನೀಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಗಲಾಟೆ ಪ್ರಕರಣ ಸಂಬಂಧ ಈ ವರೆಗೆ ನಾಲ್ವರನ್ನು ಬಂಧಿಸಲಾಗಿದ್ದು ತನಿಖೆ ನಡೆದಿದೆ ಎಂದು ಹೇಳಿದ್ದಾರೆ.

ಕರಡಿಗುದ್ದಿ ಗ್ರಾಮದ ಭರಮೋಜಿ ಅರಬಳ್ಳಿ, ದೊಡ್ಡಪ್ಪ ಅರಬಳ್ಳಿ, ಬಸವಂತ ಕರವಿನಕೊಪ್ಪ ಹಾಗು ಮಾರಿಹಾಳ ಗ್ರಾಮದ ಲಕ್ಕಪ್ಪ ಬಸಪ್ಪ ಹಳ್ಳಿ ಎಂಬ ನಾಲ್ವರ ಬಂಧನವಾಗಿದೆ. ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಆರಂಭವಾಗಿದ್ದ ಜಗಳ ವಿಕೋಪಕ್ಕೆ ತಿರುಗಿತ್ತು. ಘಟನೆಯಲ್ಲಿ ಬೈಲಹೊಂಗಲ ತಾಲೂಕಿನ ಸುಂಕುಪ್ಪಿ ಗ್ರಾಮದ ಮುದುಕಪ್ಪ ಅಂಗಡಿ(25) ಸಾವಿಗೀಡಾದರು. ಏಳು ಜನರಿಗೆ ಗಾಯಗಳಾಗಿವೆ.

ಮೃತನು ಕೊಲೆ ಯತ್ನ ಪ್ರಕರಣದ ವಿಚಾರಣೆಗಾಗಿ ಬೆಳಗಾವಿ ಕೋರ್ಟಗೆ ಬಂದಿದ್ದ. ನಂತರ ಬೆಳಗಾವಿಯಿಂದ ಬೈಲಹೊಂಗಲಕ್ಕೆ ಹೋಗುವಾಗ ಕರಡಿಗುದ್ದಿಯಲ್ಲಿ ವಾಹನ ನಿಲ್ಲಿಸಿದ್ದಾರೆ. ಆಗ ಅಲ್ಲಿದ್ದ ಜನರೊಂದಿಗೆ ಸಣ್ಣ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಉಭಯ ಗುಂಪುಗಳ ಮಧ್ಯೆ ಭಾರಿ ಹೊಡೆದಾಟ ನಡೆದಿದೆ. ಹೊಡೆದಾಟದಲ್ಲಿ ಓರ್ವನ ಹತ್ಯೆಯಾಗಿದ್ದು, ಏಳು ಜನರು ಗಾಯಗೊಂಡಿದ್ದರು ಎಂದು ಅವರು ಮಾಹಿತಿ ನೀಡಿದ್ದಾರೆ.

You might also like
Leave a comment