This is the title of the web page

ಹಿಜಾಬ್ ತೀರ್ಪಿಗೆ ಅಸಮಾಧಾನ; ಗುರುವಾರ ಕರ್ನಾಟಕ ಬಂದ್ ಗೆ ಕರೆ

ಬೆಂಗಳೂರು, 16- ಹಿಜಾಬ್ ಗೆ ಸಂಬಂಧಿಸಿದಂತೆ ಕರ್ನಾಟಕ ಉಚ್ಚ ನ್ಯಾಯಾಲಯ ನೀಡಿರುವ ತೀರ್ಪು ತೃಪ್ತಿಕರವಾಗಿಲ್ಲ ಎಂದು ಮುಸ್ಲಿಂ ಸಂಘಟನೆ ಅಮೀರ-ಎ-ಶರಿಯತ್  ಅಸಮಾಧಾನ ವ್ಯಕ್ತಪಡಿಸಿದ್ದು ಗುರುವಾರ ಮಾರ್ಚ 17 ರಂದು ಕರ್ನಾಟಕ ಬಂದ್ ಗೆ ಕರೆ ನೀಡಿದೆ.

ಕೋರ್ಟ ತೀರ್ಪು ನಿರಾಶಾದಾಯಕವಾಗಿದ್ದು, ಶಾಂತಿಯುತವಾಗಿ ಬಂದ್ ನಡೆಸಬೇಕು ಎಂದು ಅಮೀರ-ಎ-ಶರಿಯತ್ ಮುಖ್ಯಸ್ಥ ಮೌಲಾನಾ ಸಗೀರ ಅಹಮದ ಕರೆ ನೀಡಿದ್ದಾರೆ.

ಬಲವಂತದ ಬಂದ್ ಆಗಲಿ, ಜಾಥಾ , ಮೆರವಣಿಗೆ ಆಗಲಿ ಮತ್ತು ಘೋಷಣೆ ಕೂಗುವುದಾಗಲಿ  ಮಾಡಬಾರದು ಎಂದು ಅವರು ಮನವಿ ಮಾಡಿದ್ದಾರೆ.

”ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಭಾಗವಲ್ಲ. ಸಮವಸ್ತ್ರ ಸಂಹಿತೆ ಕುರಿತಾಗಿ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ, ಇದನ್ನು ಪ್ರಶ್ನಿಸುವಂತಿಲ್ಲ” ಎಂದು ಕರ್ನಾಟಕ ಹೈಕೋರ್ಟ ತೀರ್ಪು ನೀಡಿತ್ತು.

IMG_8601

 

You might also like
Leave a comment