This is the title of the web page

ಕೋಮಾ ಸ್ಥಿತಿಯಲ್ಲಿ ಮಗ : ಜೀಸಸ್ ಮುಂದಿಟ್ಟು ತಾಯಿ ಅಳಲು 

 

 

ಬೆಳಗಾವಿ: ಕಳೆದ ಕೆಲ ತಿಂಗಳಿಂದ ಏಳು ವರ್ಷದ ಮೆದುಳು ಜ್ವರದಿಂದ ಬಳಲುತ್ತಿರುವ ಮಗನನ್ನು ಉಳಿಸಿಕೊಳ್ಳಲು ದೇವರ ಮೊರೆ ಹೋಗಿರುವ ಘಟನೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ಐತಿಹಾಸಿಕ ಶಿಲುಬೆ ಬಳಿ ನಡೆದಿದೆ.

ಮಗನನ್ನು ಮಲಗಿಸಿ ಮಗನನ್ನು ಕಾಪಾಡು ಎಂದು ತಾಯಿ ಪ್ರಾರ್ಥಿಸಿದ್ದಾಳೆ. ಕೆಲ ತಿಂಗಳಿಂದ ಏಳು ವರ್ಷದ ಶೈಲೇಶ ಎಂಬ ಬಾಲಕ ಮೆದುಳು ಜ್ವರದಿಂದ ಬಳಲುತ್ತಿದ್ದಾನೆ. ಎರಡು ತಿಂಗಳು ಕಳೆದರೂ ಗುಣಮುಖನಾಗಿಲ್ಲ. ಹೀಗಾಗಿ ದಿಕ್ಕೇ ತೋಚದ ತಾಯಿ ಜೀಸಸ್ ಮುಂದೆ ನಿಂತು ಕಣ್ಣೀರು ಹಾಕಿದ್ದಾಳೆ.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಕೃಷ್ಣಾ ಮತ್ತು ಸುತ್ರಾವಿ ದಂಪತಿ ಪುತ್ರ ಶೈಲೇಶ. ದಂಪತಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ.

ಏಳು ವರ್ಷದ ಮಗನಿಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸುಸ್ತಾಗಿದ್ದಾರೆ. ಎರಡು ತಿಂಗಳು ಕಳೆದರೂ ಶೈಲೇಶ ಗುಣಮುಖನಾಗಿಲ್ಲ. ಹೀಗಾಗಿ ಮನೆಗೆ ಕರೆದೊಯ್ಯಲು ವೈದ್ಯರು ತಿಳಿಸಿದ್ದಾರೆ.

ಕುಟುಂಬಸ್ಥರು ಆರು ದಿನ ಮನೆಯಲ್ಲಿ ಇಟ್ಟುಕೊಂಡು ನಂದಗಡಕ್ಕೆ ಬಂದಿದ್ದಾರೆ. ಈ ವೇಳೆ ಶಿಲುಬೆ ಎದುರು ಮಗುವನ್ನು ಮಲಗಿಸಿ ಮಗನನ್ನು ಬದುಕಿಸಿ ಕೊಡುವಂತೆ ತಾಯಿ ಪ್ರಾರ್ಥಿಸಿ ಮನೆಗೆ ಕರೆದುಕೊಂಡು ಹೋಗಿದ್ದಾರೆ.

You might also like
Leave a comment