Live Stream

December 2022
W T F S S M T
 123456
78910111213
14151617181920
21222324252627
28293031  

| Latest Version 8.2.9 |

Local News

ದೀಪಾವಳಿ ಹಬ್ಬದ ಖರೀದಿ ಮಾಡಿ ಬೈಕ್ ಮೇಲೆ ಹೊರಟ ಬಾಲಕ ಗಾಳಿಪಟದ ದಾರಕ್ಕೆ ಬಲಿ


ಬೆಳಗಾವಿ : ದೀಪಾವಳಿ ಹಬ್ಬಕ್ಕೆ ಬೆಳಗಾವಿಯಲ್ಲಿ ಬಟ್ಟೆ ಖರೀದಿಸಿ ಮರಳಿ ತನ್ನ ಊರಿಗೆ ತಂದೆಯೊಂದಿಗೆ ದ್ವಿಚಕ್ರ ವಾಹನದ ಮೇಲೆ ಹೊರಟಿದ್ದಾಗ ಗಾಳಿಪಟದ ಮಾಂಜಾ ದಾರ ಕುತ್ತಿಗೆಗೆ  ಸುತ್ತಿಕೊಂಡು ಯಮಕನಮರಡಿಯ ಐದು ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ಇಲ್ಲಿಯ ಗಾಂಧಿ ನಗರ ಸಮೀಪ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.

ಯಮಕನಮರಡಿ ಸಮೀಪದ ಅನಂತಪುರ ಗ್ರಾಮದ ವರ್ಧನ ಈರಣ್ಣ ಬೇಲಿ ಎಂಬ ಬಾಲಕ ಮೃತಪಟ್ಟಿದ್ದಾನೆ. ಗಾಂಧಿ ನಗರದ ಹಣ್ಣಿನ ಮಾರುಕಟ್ಟೆ ಎದುರಿನ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬಾಲಕನ ಕುತ್ತಿಗೆಗೆ ಮಾಂಜಾ ದಾರ ಬಿಗಿದಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮಗುವನ್ನು ಬದುಕಿಸಲು ತಂದೆ ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ದ್ವಿಚಕ್ರ ವಾಹನದ ಮೇಲೆ ತಂದೆ ಈರಣ್ಣ ಅವರೊಂದಿಗೆ ವರ್ಧನ ಬೆಳಗಾವಿಗೆ ಬಟ್ಟೆ ಖರೀದಿಗೆ ಬಂದಿದ್ದನು. ನಗರದಲ್ಲಿ ಬಟ್ಟೆ ಖರೀದಿಸಿ ಬೆಳಗಾವಿಯಿಂದ ತಮ್ಮೂರಿಗೆ ಹೊರಟಿದ್ದರು. ದ್ವಿಚಕ್ರ ವಾಹನದಲ್ಲಿ ಮುಂಭಾಗದಲ್ಲಿ ವರ್ಧನ ಕುಳಿತುಕೊಂಡಿದ್ದ. ಕಣ್ಣಿಗೆ ಕಾಣಿಸದ ಮಾಂಜಾ ದಾರ ನೇರವಾಗಿ ವರ್ಧನ ಕುತ್ತಿಗೆಗೆ ಬಿಗಿದು ಸ್ಥಳದಲ್ಲಿಯೇ ಅಸುನೀಗಿದ್ದಾನೆ.

ಕೆಲ ವರುಷದ ಹಿಂದೆ ಇದೇ ಸ್ಥಳದಲ್ಲಿ ಇದೇ ಪ್ರಕಾರದ ಘಟನೆ ನಡೆದು ಬಾಲಕನೊಬ್ಬ ಮೃತ ಪಟ್ಟಿದ್ದ, ಆಗ ಮಾಂಜಾ ದಾರ ಮಾರಾಟವನ್ನು ಪೊಲೀಸ್ ಇಲಾಖೆ ನಿಷೇದಿಸಿತ್ತು, ಆದರೂ ಅನೇಕ ಅಂಗಡಿಗಳಲ್ಲಿ ಗಾಜಿನ ಪುಡಿ ಸವರಿ ಮಾಡಿದ ಮಾಂಜಾ ದಾರ ಮಾರಾಟವಾಗುತ್ತಿದುದಕ್ಕೆ ಇಂದಿನ ಘಟನೆ ಸಾಕ್ಷಿಯಾಗಿದೆ.

ಮಾಂಜಾ ಸಂಪೂರ್ಣ ನಿಷೇಧಿಸಲು ಜಿಲ್ಲಾಡಳಿತ ಹಾಗೂ ಪೊಲೀಸರು ಅಗತ್ಯ ಕ್ರಮ ಜರುಗಿಸಬೇಕು ಎಂದು ಬಾಲಕನ ಸಂಬಂಧಿಕರು ಆಗ್ರಹಿಸಿದ್ದಾರೆ.


A B Dharwadkar
the authorA B Dharwadkar

Leave a Reply